ಪದಕ ಪ್ರದಾನ ಸಮಾರಂಭಗಳು ಸಾಮಾನ್ಯವಾಗಿ ಯಾವುದೇ ಕ್ರೀಡಾಕೂಟದ ಪ್ರಮುಖ ಅಂಶಗಳಾಗಿವೆ. ಇವು ಗಂಭೀರವಾದ ಮತ್ತು ಅತ್ಯಂತ ಸಂಭ್ರಮದ ಕ್ಷಣಗಳಾಗಿವೆ.
ಆದರೆ ಇಂತಹ ಸಂಭ್ರಮಾಚರಣೆಯ ವೇಳೆಯಲ್ಲಿ ನಿರೀಕ್ಷಿಸಲಾಗದ ತಮಾಷೆಯೊಂದು ನಡೆದಿದೆ. ಪದಕ ಪ್ರದಾನ ಸಮಾರಂಭವು ಹೊಸ ತಿರುವು ಪಡೆದ ಕ್ಷಣವದು. ಆ ಕ್ಷಣ ಕಂಡ ಪ್ರೇಕ್ಷಕರು ಒಮ್ಮೆ ದಂಗಾಗಿಹೋದರು.
ಅಸಲಿಗೆ ಅಲ್ಲಿ ಆಗಿದ್ದೇನೆಂದರೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಸ್ಪರ್ಧೆಯಲ್ಲಿ ಗೆದ್ದ ಮೂವರು ಯುವತಿಯರು ತಮ್ಮ ಸ್ಥಾನದ ಆಧಾರದ ಮೇಲೆ ಪದಕ ಸ್ವೀಕರಿಸಲು ವೇದಿಕೆಯಲ್ಲಿರುತ್ತಾರೆ.
ಪ್ರಥಮ ಸ್ಥಾನ ಗಳಿಸಿದ್ದ ಯುವತಿಗೆ ಹಾಕಬೇಕಾಗಿದ್ದ ಚಿನ್ನದ ಪದಕವನ್ನು ಪುರುಷ ಅತಿಥಿಯು ಮೂರನೇ ಸ್ಥಾನ ಪಡೆದಿದ್ದ ಯುವತಿಗೆ ಹಾಕುತ್ತಾರೆ. ಇದನ್ನು ನೋಡಿ ಗಾಬರಿಗೊಂಡ 2ನೇ ಸ್ಥಾನ ಪಡೆದಿದ್ದ ಯುವತಿ ಇದು ಚಿನ್ನದ ಪದಕ, ಇದನ್ನು ಪಕ್ಕದಲ್ಲಿರುವ ಪ್ರಥಮ ಸ್ಥಾನ ಪಡೆದವರಿಗೆ ಹಾಕಬೇಕಾಗಿತ್ತು ಎಂದು ಸೂಚಿಸುತ್ತಾಳೆ.
ತಕ್ಷಣ ಎಚ್ಚೆತ್ತುಕೊಂಡು ಪದಕ ಸ್ವೀಕರಿಸಿದ್ದ ಯುವತಿ ನಗುತ್ತಾ ಅದನ್ನು ತಾನಾಗೇ ತನ್ನ ಪಕ್ಕದಲ್ಲಿದ್ದ ಪ್ರಥಮ ಸ್ಥಾನ ಪಡೆದಿದ್ದ ಯುವತಿಯ ಕೊರಳಿಗೆ ಹಾಕುತ್ತಾಳೆ. ಈ ವೇಳೆ ಪದಕ ವಿಜೇತ ಯುವತಿಯರು ಸೇರಿದಂತೆ ಸಭಾಂಗಣ ಬಿದ್ದು ಬಿದ್ದು ನಕ್ಕಿದೆ.
ಪದಕ ಪ್ರದಾನ ಸಮಾರಂಭದ ಈ ವೀಡಿಯೊ ತ್ವರಿತವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಬಗೆಬಗೆಯ ರೀತಿಯಲ್ಲಿ ವಿಡಿಯೋ ನೋಡಿ ತಮಾಷೆ ಮಾಡಿದ್ದಾರೆ.