ಪಾದಗಳಲ್ಲಿ ಧೂಳು, ಕೊಳೆ ಕುಳಿತುಕೊಂಡು ಪಾದಗಳು ಒರಟಾಗಿ ಬಿರುಕು ಬಿಡುತ್ತದೆ. ಇದರಿಂದ ನಿಮ್ಮ ಪಾದಗಳಲ್ಲಿ ನೋವು, ರಕ್ತ ಕಾಣಿಸಿಕೊಳ್ಳು ತ್ತದೆ. ಇದು ನಿಮ್ಮನ್ನ ಮುಜುಗರಕ್ಕೀಡಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಪಾದಗಳನ್ನು ಇವುಗಳಿಂದ ಮಸಾಜ್ ಮಾಡಿ.
*ಜೇನುತುಪ್ಪ: ಜೇನುತುಪ್ಪದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಇದು ಗಾಯಗಳನ್ನು ಶುದ್ಧೀಕರಿಸಲು ಮತ್ತು ಚರ್ಮವನ್ನು ತೇವಗೊಳಿಸಲು ಸಹಾಯ ಮಾಡುತ್ತದೆ. ಒಂದು ಬಕೆಟ್ ಬೆಚ್ಚಗಿನ ನೀರಿನಲ್ಲಿ 1 ಕಪ್ ಜೇನುತುಪ್ಪ ಮಿಕ್ಸ್ ಮಾಡಿ ಅದರಲ್ಲಿ ಪಾದಗಳನ್ನು ನೆನೆಸಿ ಸುಮಾರು 20 ನಿಮಿಷಗಳ ಕಾಲ ನಿಧಾನವಾಗಿ ಸ್ಕ್ರಬ್ ಮಾಡಿ.
*ಆಲಿವ್ ಆಯಿಲ್ : ಇದು ಚರ್ಮವನ್ನು ಮೃದುವಾಗಿ ಮಾಡಲು ಸಹಾಯ ಮಾಡುತ್ತದೆ. 1 ಚಮಚ ಆಲಿವ್ ಆಯಿಲ್ ನ್ನು ಹತ್ತಿ ಉಂಡೆಗಳಿಂದ ತೆಗೆದುಕೊಂಡು 15 ನಿಮಿಷಗಳ ಕಾಲ ಮಸಾಜ್ ಮಾಡಿ ಸಾಕ್ಸ್ ಧರಿಸಿ ಒಂದು ಗಂಟೆಯ ಬಳಿಕ ವಾಶ್ ಮಾಡಿ.
*ಬಾಳೆಹಣ್ಣು ಮತ್ತು ಆವಕಾಡೊ : ಆವಕಾಡೋನಲ್ಲಿ ವಿಟಮಿನ್ ಎ, ಇ ಮತ್ತು ಒಮೆಗಾ ಕೊಬ್ಬಿನಾಮ್ಲವಿದೆ. ಇದು ಚರ್ಮವನ್ನು ಮೃದುಗೊಳಿಸುವುದರ ಜೊತೆಗೆ ಗಾಯವನ್ನು ವಾಸಿಮಾಡುತ್ತದೆ. ಹಾಗಾಗಿ ಬಾಳೆಹಣ್ಣು ಮತ್ತು ಆವಕಾಡೋ ಫೇಸ್ಟ್ ತಯಾರಿಸಿ ಪಾದಗಳಿಗೆ ಹಚ್ಚಿ. 20 ನಿಮಿಷ ಬಿಟ್ಟು ವಾಶ್ ಮಾಡಿ.