alex Certify 3 ವರ್ಷದ ದಾಂಪತ್ಯ ಜೀವನದ ಬಳಿಕ ತಾವು ಸೋದರ ಸಂಬಂಧಿಗಳೆಂದು ತಿಳಿದು ಶಾಕ್​ ಆದ ದಂಪತಿ: ಮುಂದೇನಾಯ್ತು ನೋಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3 ವರ್ಷದ ದಾಂಪತ್ಯ ಜೀವನದ ಬಳಿಕ ತಾವು ಸೋದರ ಸಂಬಂಧಿಗಳೆಂದು ತಿಳಿದು ಶಾಕ್​ ಆದ ದಂಪತಿ: ಮುಂದೇನಾಯ್ತು ನೋಡಿ…!

ದಾಂಪತ್ಯ ಜೀವನ ಅಂದ್ರೆ ಏಳೇಳು ಜನ್ಮಗಳ ಬಂಧ ಎಂದು ಹೇಳುತ್ತಾರೆ. ಆದರೆ ಮೂರು ವರ್ಷಗಳ ದಾಂಪತ್ಯ ಜೀವನದ ಬಳಿಕ ಅಮೆರಿಕ, ಉಠ್ಹಾದ ಟೈಲೀ ಹಾಗೂ ನಿಕ್​ ವಾಟರ್ಸ್​ ದಂಪತಿ ತಮ್ಮ ಸಂಬಂಧದ ಬಗ್ಗೆ ತಿಳಿದುಕೊಂಡ ಸತ್ಯದಿಂದಾಗಿ ಶಾಕ್​ ಆಗಿದ್ದಾರೆ.

ಟಿಕ್​ಟಾಕ್​ನಲ್ಲಿ ಆಗಾಗ ವಿಡಿಯೋ ಶೇರ್ ಮಾಡುವ ಈ ದಂಪತಿ ಅಸಲಿಗೆ ಸೋದರ ಸಂಬಂಧಿಗಳು ಎಂದು ತಿಳಿದು ಬಂದಿದೆ. ಇವರಿಬ್ಬರ ಸಂಬಂಧದ ನಡುವಿನ ಈ ಟ್ವಿಸ್ಟ್​ ಈ ದಂಪತಿಯ ಫಾಲೋವರ್ಸ್​ಗೂ ಆಶ್ಚರ್ಯವನ್ನುಂಟು ಮಾಡಿದೆ.

ಇಬ್ಬರ ನಡುವಿನ ನಿಜವಾದ ಸಂಬಂಧದ ಬಗ್ಗೆ ತಿಳಿದ ಬಳಿಕ ದಾಂಪತ್ಯ ಜೀವನವನ್ನು ಕೊನೆಗೊಳಿಸುವ ನಿರ್ಧಾರ ತೆಗೆದುಕೊಳ್ಳದ ಈ ದಂಪತಿ ಜೋಡಿಯಾಗಿ ಮುಂದುವರಿಯಲು ನಿರ್ಧರಿಸಿದ್ದಾರೆ. ಟಿಕ್​ಟಾಕ್​ನಲ್ಲಿ ಸದಾ ಫನ್ನಿ ವಿಡಿಯೋಗಳನ್ನ ಈ ದಂಪತಿ ಶೇರ್​ ಮಾಡುತ್ತಿರುತ್ತಾರೆ.

ತಾವು ಅಸಲಿಗೆ ಸೋದರ ಸಂಬಂಧಿಗಳು ಎಂದು ತಿಳಿದುಕೊಂಡ ಬಳಿಕ ಟಿಕ್​ಟಾಕ್​ನಲ್ಲಿ ಈ ದಂಪತಿ ಮಾಹಿತಿ ಹಂಚಿಕೊಂಡಿದ್ದಾರೆ. ಇದಾದ ಬಳಿಕ ಇನ್ನೊಂದು ವಿಡಿಯೋ ಪೋಸ್ಟ್​ ಮಾಡಿದ ಟೈಲಿ ಹಾಗೂ ನಿಕ್​ ವಾಟರ್ಸ್​ ದಂಪತಿ ನಾವು ಸೋದರ ಸಂಬಂಧ ಹೊಂದಿದ್ದರೂ ಸಹ ನಮ್ಮ ದಾಂಪತ್ಯ ಜೀವನ ಕೊನೆಗಾಣಿಸೋ ನಿರ್ಧಾರಕ್ಕೆ ನಾವು ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ ಈ ದಂಪತಿ ತಾವು ಯಾವ ರೀತಿಯಲ್ಲಿ ಸೋದರ ಸಂಬಂಧಿಗಳಾಗಬೇಕು ಅನ್ನೋದ್ರ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಟಿಕ್​ಟಾಕ್​ನಲ್ಲಿ ಟೈಲಿ ಹಾಗೂ ನಿಕ್​ ತಮ್ಮ ಜೀವನದ ಈ ಟ್ವಿಸ್ಟ್​ ಬಗ್ಗೆ ಮಾಹಿತಿ ಹಂಚಿಕೊಳ್ತಿದ್ದಂತೆ ಅನೇಕರು ಕಮೆಂಟ್​ನಲ್ಲಿ ತಮ್ಮ ತಮ್ಮ ದಾಂಪತ್ಯ ಜೀವನದ ಟ್ವಿಸ್ಟ್​ಗಳ ಬಗ್ಗೆಯೂ ಮಾಹಿತಿ ಶೇರ್​ ಮಾಡಿದ್ದಾರೆ.

— theJasmineBRAND (@thejasminebrand) September 7, 2023

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...