Mysore Dasara : ಜಂಬೂಸವಾರಿಗೆ ಕ್ಷಣಗಣನೆ : ಗಮನ ಸೆಳೆಯಲಿದೆ 49 ವಿವಿಧ ಸ್ತಬ್ದಚಿತ್ರಗಳು..!

ಮೈಸೂರು : ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಸರ್ಕಾರದ 5 ಗ್ಯಾರಂಟಿ ಯೋಜನೆಯ ಟ್ಯಾಬ್ಲೊಗಳು  ಸೇರಿ 49 ವಿವಿಧ ಸ್ತಬ್ದಚಿತ್ರಗಳು ಗಮನ ಸೆಳೆಯಲಿದೆ.

ಹೌದು. ರಾಜ್ಯ ಸರ್ಕಾರದ ಐದು ಯೋಜನೆಗಳ ಸಂದೇಶ ಸಾರುವ ಸ್ತಬ್ಧ ಚಿತ್ರಗಳು ಕೂಡ ಜಂಬೂ ಸವಾರಿ ಮೆರವಣಿಗೆಯಲ್ಲಿ ಸಾಗಲಿವೆ. ಶಕ್ತಿ ಯೋಜನೆ, ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆ, ಯುವನಿಧಿ ಯೋಜನೆಯ ಸ್ಥಬ್ಧ ಚಿತ್ರಗಳನ್ನು ನಿರ್ಮಾಣ ಮಾಡಲಾಗಿದೆ. 5  ಗ್ಯಾರಂಟಿ ಯೋಜನೆಯ ಟ್ಯಾಬ್ಲೋ ಸೇರಿದಂತೆ ಒಟ್ಟು  49 ಟ್ಯಾಬ್ಲೋಗಳು ಗಮನ ಸೆಳೆಯಲಿದೆ.

ಅರಮನೆಯಿಂದ ಬನ್ನಿ ಮಂಟಪದವರೆಗೂ ಸ್ಥಬ್ಧ ಚಿತ್ರಗಳು ಸಾಗಲಿವೆ. ರಾಜ್ಯದ ವಿವಿಧ ಭಾಗಗಳಿಂದ ಟ್ಯಾಬ್ಲೊಗಳು ಆಗಮಿಸಿವೆ. ಮೈಸೂರು ದಸರಾ ವೀಕ್ಷಿಸಲು ದೇಶದ ವಿದೇಶದಿಂದ ಪ್ರವಾಸಿಗರು ಆಗಮಿಸಿದ್ದಾರೆ. 11 ಐಪಿಎಸ್ ಅಧಿಕಾರಿಗಳು ಸೇರಿದಂತೆ 4000 ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಅ. 24 (ಮಂಗಳವಾರ) ರಂದು ಮಧ್ಯಾಹ್ನ 1.46ರಿಂದ 2.08ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆ ಬಲರಾಮ ದ್ವಾರದಲ್ಲಿರುವ ನಂದಿಧ್ವಜಕ್ಕೆ ಸಿಎಂ ಸಿದ್ದರಾಮಯ್ಯ ಪೂಜೆ ನೆರವೇರಿಸುವರು.

ಜಂಬೂಸವಾರಿ ಆರಂಭಕ್ಕೂ ಮುನ್ನ ನಂದಿಧ್ವಜ ಸ್ಥಂಭಕ್ಕೆ ಪೂಜೆ ನೆರವೇರಿಸಲಾಗುತ್ತದೆ. ಉಡಿಗಾಲು ಮಹದೇವಪ್ಪ ಅವರ ಕುಟುಂಬ 60 ವರ್ಷಗಳಿಂದ ನಂದಿಧ್ವಜ ಸ್ಥಂಭ ಹೊತ್ತು ಸಾಗುತ್ತಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read