ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳ ಸೇವನೆ ಮಾಡುವುದು ಬಹಳ ಮುಖ್ಯ. ಸರಿಯಾದ ಸಮಯದಲ್ಲಿ ಹಣ್ಣು ಸೇವನೆ ಮಾಡಿದಲ್ಲಿ ಮಾತ್ರ ಅದ್ರ ಪ್ರಯೋಜನ ಸಿಗುತ್ತದೆ. ಹಣ್ಣುಗಳನ್ನು ತಿನ್ನಲು ಸರಿಯಾದ ಮಾರ್ಗ ಯಾವುದು ಎಂಬುದನ್ನು ತಿಳಿಯಬೇಕು.
ಹಣ್ಣುಗಳನ್ನು ಸಿಪ್ಪೆ ಸಮೇತ ಸೇವನೆ ಮಾಡ್ಬೇಕಾ ಇಲ್ಲ ಸಿಪ್ಪೆ ಬಿಟ್ಟು ತಿನ್ನಬೇಕಾ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ತಜ್ಞರ ಪ್ರಕಾರ, ಹಣ್ಣುಗಳನ್ನು ಸಿಪ್ಪೆ ಸಮೇತ ಸೇವನೆ ಮಾಡ್ಬೇಕು. ಇದ್ರಿಂದ ಬಹಳಷ್ಟು ಫೈಬರ್ ಸೇರಿದಂತೆ ಅನೇಕ ಫೋಷಕಾಂಶ ನಮ್ಮ ದೇಹ ಸೇರುತ್ತದೆ.
ಸೇಬು ಹಣ್ಣು, ಪೇರಲೆ ಹಣ್ಣುಗಳನ್ನು ಸಿಪ್ಪೆ ಸಮೇತ ಸೇವನೆ ಮಾಡಬಹುದು. ಆದ್ರೆ ಕಿತ್ತಳೆ ಹಣ್ಣು ಸೇವನೆ ಮಾಡುವ ವೇಳೆ ಏನು ಮಾಡ್ಬೇಕು ಎಂಬ ಪ್ರಶ್ನೆ ಕಾಡುತ್ತದೆ. ಕಿತ್ತಳೆ ಹಣ್ಣಿನ ಮೇಲಿನ ಸಿಪ್ಪೆ ತೆಗೆದು ಒಳಗಿನ ಬಿಳಿ ಸಿಪ್ಪೆಯನ್ನು ಅವಶ್ಯಕವಾಗಿ ಸೇವನೆ ಮಾಡಬೇಕೆಂದು ತಜ್ಞರು ಹೇಳಿದ್ದಾರೆ.
ಬಾಳೆಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನಬೇಕು. ಇದರಲ್ಲಿ ವಿಟಮಿನ್ ಬಿ 12, ಪೊಟ್ಯಾಸಿಯಮ್-ಮೆಗ್ನೀಸಿಯಮ್ ಮತ್ತು ಬಹಳಷ್ಟು ಕಾರ್ಬೋಹೈಡ್ರೇಟ್‌ಗಳಿವೆ. ಸಿಪ್ಪೆಯೊಂದಿಗೆ ಬಾಳೆಹಣ್ಣು ತಿನ್ನುವ ಮೊದಲು ಅದನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಹಣ್ಣುಗಳನ್ನು ಮಾತ್ರವಲ್ಲ ಕ್ಯಾರೆಟ್, ಸೌತೆಕಾಯಿ, ಮೂಲಂಗಿಯನ್ನು ಸಿಪ್ಪೆ ಸಮೇತ ಸೇವನೆ ಮಾಡ್ಬೇಕು.