ಕೆಲವರಿಗೆ ಕಣ್ಣಿನ ಸಮಸ್ಯೆಗಳಿಗೆ ಕನ್ನಡಕದ ಬಳಕೆ ಅನಿವಾರ್ಯವಾಗಿರಬಹುದು. ಆದರೆ ನಿಮ್ಮ ಈ ಕೆಲವು ಅಭ್ಯಾಸಗಳು ಕನ್ನಡಕದ ಬಳಕೆಯನ್ನು ತಪ್ಪಿಸಲು ಕಾರಣವಾಗಬಹುದು.
ನಿತ್ಯ ತಾಮ್ರದ ಪಾತ್ರೆಯಲ್ಲಿ ಹಾಕಿಟ್ಟ ನೀರು ಕುಡಿಯಿರಿ. ಇದು ದೃಷ್ಟಿ ಸಮಸ್ಯೆಯನ್ನು ದೂರ ಮಾಡಲು ಸಹಕಾರಿ.
ನೆಲ್ಲಿಕಾಯಿಗಳನ್ನು ನೇರವಾಗಿ ಅಥವಾ ಆಹಾರದ ರೂಪದಲ್ಲಿ ಪ್ರತಿನಿತ್ಯ ಸೇವಿಸಿ. ಇದರಿಂದಲೂ ಕಣ್ಣಿನ ಸಮಸ್ಯೆಗಳು ನಿಮ್ಮ ಸಮೀಪ ಸುಳಿಯುವುದಿಲ್ಲ.
ಮೆಂತೆ ಜೊತೆ ಬಾದಾಮಿ ಮತ್ತು ಕಲ್ಲುಸಕ್ಕರೆ ಬೆರೆಸಿ ಜೊತೆಯಾಗಿ ರುಬ್ಬಿ. ಇದನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿ. ಇದರಿಂದಲೂ ಕಣ್ಣುಗಳ ದೃಷ್ಟಿ ಚುರುಕಾಗುತ್ತದೆ.
ಜೀರಿಗೆ ಮತ್ತು ಕಲ್ಲುಸಕ್ಕರೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ. ನಯವಾಗಿ ರುಬ್ಬಿ ತುಪ್ಪದೊಂದಿಗೆ ಸೇವಿಸಿದರೆ ನಿಮ್ಮ ಕಣ್ಣಿನ ಸಮಸ್ಯೆಗಳು ದೂರವಾಗುತ್ತವೆ.