ನವದೆಹಲಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.
ದೆಹಲಿಯ ಪ್ರಧಾನ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಕೇಂದ್ರ ಚುನಾವಣಾ ಸಮಿತಿ(ಸಿಇಸಿ) ಸಭೆಯಲ್ಲಿ ಪಕ್ಷದ ಚಿಂತನ-ಮಂಥನದ ನಂತರ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಯಿತು. ಸಭೆಯಲ್ಲಿ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಕ್ಷವು ಮತ್ತೊಮ್ಮೆ ಕೇರಳದ ವಯನಾಡಿನಿಂದ ರಾಹುಲ್ ಗಾಂಧಿಯವರನ್ನು ಕಣಕ್ಕಿಳಿಸಿದೆ. ಶಶಿ ತರೂರ್ ತಿರುವನಂತಪುರದಿಂದ, ಕೆ.ಸಿ. ವೇಣುಗೋಪಾಲ್ ಕೇರಳದ ಅಲಪ್ಪುಳದಿಂದ, ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ರಾಜನಂದಗಾಂವ್‌ನಿಂದ, ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಬೆಂಗಳೂರು ಗ್ರಾಮೀಣದಿಂದ ಸ್ಪರ್ಧಿಸಲಿದ್ದಾರೆ.
ಈ ಪಟ್ಟಿಯಲ್ಲಿ 15 ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮತ್ತು SC, ST, OBC, ಮತ್ತು ಅಲ್ಪಸಂಖ್ಯಾತ ಸಮುದಾಯಗಳ 24 ಅಭ್ಯರ್ಥಿಗಳು ಇದ್ದಾರೆ ಎಂದು ಕಾಂಗ್ರೆಸ್ ಖಜಾಂಚಿ ಅಜಯ್ ಮಾಕನ್ ಹೇಳಿದ್ದಾರೆ.
ರಾಜ್ಯದ ಅಭ್ಯರ್ಥಿಗಳು:
ವಿಜಯಪುರ -ಎಸ್.ಆರ್. ಅಲಗೂರು,
ಹಾವೇರಿ –ಆನಂದ್ ಸ್ವಾಮಿ ಗಡ್ಡದೇವರಮಠ
ತುಮಕೂರು -ಮುದ್ದಹನುಮೇಗೌಡ
ಮಂಡ್ಯ –ವೆಂಕಟರಾಮೇಗೌಡ(ಸ್ಟಾರ್ ಚಂದ್ರು)
ಬೆಂಗಳೂರು ರೂರಲ್- ಡಿ.ಕೆ. ಸುರೇಶ್
ಶಿವಮೊಗ್ಗ -ಗೀತಾ ಶಿವರಾಜ್ ಕುಮಾರ್
ಹಾಸನ -ಶ್ರೇಯಸ್ ಪಟೇಲ್