ಟೆಲ್ ಅವೈವ್: ಹಿಜ್ಬುಲ್ಲಾ ಸಂಘಟನೆಯ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆಯಿಂದ ಆಕ್ರೋಶಗೊಂಡಿರುವ ಹಿಜ್ಬುಲ್ಲಾ ಉಗ್ರರು, ಯೆಮನ್ ಸೇನೆ ಮತ್ತು ಇರಾನ್ ಸೇನೆ ಮಂಗಳವಾರ ಇಸ್ರೇಲ್ ಮೇಲೆ 500ಕ್ಕೂ ಅಧಿಕ ಕ್ಷಿಪಣಿ ಮತ್ತು ರಾಕೆಟ್ ಗಳ ಮೂಲಕ ದಾಳಿ ನಡೆಸಿವೆ.
ಇಸ್ರೇಲ್ ಆಗಸದಲ್ಲಿ ಬೆಂಕಿ ಉಂಡೆಗಳಿಂದ ತುಂಬಿದ ಭೀಕರ ದೃಶ್ಯಗಳು ಕಂಡು ಬಂದಿದೆ. ಇಸ್ರೇಲ್ ನ ಸೇನಾ ನೆಲೆಗಳು ಮತ್ತು ಗುಪ್ತಚರ ಸಂಸ್ಥೆ ಮೊಸಾದ್ ಕಚೇರಿ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪೂರ್ಣ ಪ್ರಮಾಣದ ಯುದ್ಧದ ಸ್ವರೂಪ ಪಡೆಯುವ ಲಕ್ಷಣಗಳು ಕಂಡುಬಂದಿದೆ.
ಇಸ್ರೇಲ್ ಮೇಲೆ ಇರಾನ್ ನಿಂದ ಅತಿ ದೊಡ್ಡ ದಾಳಿ ನಡೆದಿದೆ. ಇಸ್ರೇಲ್ ಮೇಲೆ ಖಂಡಾಂತರ ಕ್ಷಿಪಣಿಗಳ ದಾಳಿ ನಡೆಸಲಾಗಿದೆ. ಇಸ್ರೇಲ್ ರಾಜಧಾನಿ ಮೇಲೆ ಮೇಲೆ ನೂರಕ್ಕೂ ಹೆಚ್ಚು ಕ್ಷಿಪಣಿಗಳ ದಾಳಿ ನಡೆದಿದ್ದು, ನಾಗರಿಕರು ಬಂಕರುಗಳಲ್ಲಿ ಇರುವಂತೆ ಇಸ್ರೇಲ್ ಸೇನೆ ಕರೆ ನೀಡಿದೆ. ಮಧ್ಯ ಮತ್ತು ದಕ್ಷಿಣ ಭಾಗದ ಜನರಿಗೆ ಸೇನೆಯಿಂದ ಸೂಚನೆ ನೀಡಲಾಗಿದೆ.
ಟೆಲ್ ಅವೈವ್ ನ ರೈಲು ನಿಲ್ದಾಣದ ಬಳಿ ಇಬ್ಬರು ಭಯೋತ್ಪಾದಕರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ನಸ್ರಲ್ಲಾ ಹತ್ಯೆ ನಂತರ ಅತಿ ದೊಡ್ಡ ದಾಳಿ ಇದಾಗಿದೆ.