ವಿಶೇಷ ಅಭಿಯಾನ ಮಾಡಿ ರೈತರ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಿ : ಅಧಿಕಾರಿಗಳಿಗೆ ‘CM ಸಿದ್ದರಾಮಯ್ಯ’ ಸೂಚನೆ

ಕೋಲಾರ : ವಿಶೇಷ ಅಭಿಯಾನ ಮಾಡಿ ರೈತರ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಿ ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ರೈತರು ಕೇಸುಗಳಿಗೆ ಓಡಾಡಲು ತುಂಬಾ ಖರ್ಚು ಬರುತ್ತದೆ. ಬಸ್ ಚಾರ್ಜ್, ಊಟ ತಿಂಡಿ ಖರ್ಚು ಸಿಕ್ಕಾಪಟ್ಟೆ ಬರುತ್ತದೆ. ಆದ್ದರಿಂದ ಜನರಿಗೆ ತೊಂದರೆ ಆಗಬಾರದು ಎಂದರೆ, ಅನಗತ್ಯ ಕೇಸುಗಳು ಜನರೇಟ್ ಆಗಬಾರದು. ಅನಗತ್ಯವಾಗಿ ಕೇಸುಗಳೂ ಬಾಕಿ ಇರಬಾರದು. ಅಧಿಕಾರಿಗಳ ಕಾರಣದಿಂದ ಜನರಿಗೆ ಖರ್ಚು ಆಗಬಾರದು. ವಿಶೇಷ ಅಭಿಯಾನ ಮಾಡಿ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕು.

ಎಲ್ಲಾ ತಾಲ್ಲೂಗಳಲ್ಲಿ ಇರುವ ಸರ್ಕಾರಿ ಜಮೀನು ಮತ್ತು ಕೆರೆಗಳು ಹಾಗೂ ಸರ್ಕಾರಿ ಜಾಗಗಳ ಒತ್ತುವರಿ ಮತ್ತು ತೆರವು ಕುರಿತು ತಹಶೀಲ್ದಾರ್‌ಗಳು ಮತ್ತು ಜಿಲ್ಲಾಧಿಕಾರಿಗಳು ಮಾಹಿತಿ ನೀಡಬೇಕು. ಸರ್ಕಾರಿ ಜಾಗಗಳ ಕುರಿತು ಸಮಗ್ರ ಮಾಹಿತಿ ನಿಮ್ಮ ಬಳಿ ಇದ್ದರೆ ಮಾತ್ರ ಅಂಗನವಾಡಿ, ಸ್ಮಶಾನ ಮತ್ತು ಇತರೆ ಅಗತ್ಯಗಳಿಗೆ ಜಮೀನು ಮಂಜೂರು ಮಾಡಲು ಸಾಧ್ಯ.ಶಾಲೆಗಳಲ್ಲಿ ಕೊಠಡಿಗಳ ಕೊರತೆ ಎಷ್ಟಿದೆ? ದುರಸ್ತಿ ಎಷ್ಟಾಗಬೇಕು? ಸರ್ಕಾರಕ್ಕೆ ವರದಿ ನೀಡಿ ಹಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆಯಾ? ಎಷ್ಟು ಶಾಲೆಗಳಿಗೆ ಭೇಟಿ ನೀಡಿದ್ದೀರಿ? ಶಾಲೆಗಳ ಸ್ಥಿತಿಗತಿ, ಶಿಕ್ಷಕರ ಕೊರತೆ ಇದೆಯಾ? ಎಂಬ ಮಾಹಿತಿ ಒದಗಿಸಿ.

ರೆವಿನ್ಯೂ ಮತ್ತು ಸರ್ಕಾರಿ ಜಾಗವನ್ನು ಏಕಾಏಕಿ ಸೆಕ್ಷನ್ 4ರ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ಸೇರಿಸಿ ಕೆರೆ ಹೂಳು ತೆಗೆಯಲು ಮತ್ತಿತರೆ ಕಾರ್ಯಗಳಿಗೆ ಅರಣ್ಯಾಧಿಕಾರಿಗಳು ತೊಂದರೆ ಕೊಡಬಾರದು ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read