ಉದ್ಯೋಗಿಗಳು ಯಾವುದೇ ಕಂಪನಿಯ ಅತ್ಯಮೂಲ್ಯ ಆಸ್ತಿ. ಕಚೇರಿಯಲ್ಲಿ ಉತ್ತಮ ಕೆಲಸದ ವಾತಾವರಣವನ್ನು ಬೆಳೆಸಲು ಉದ್ಯೋಗಿಗಳ ಪ್ರಯತ್ನಗಳಿಗೆ ಮೆಚ್ಚುಗೆ ಮತ್ತು ಮಾನ್ಯತೆ ನೀಡುವುದು ಅತ್ಯಗತ್ಯ. ಆದರೆ ವಿಷಾದನೀಯ ಬೆಳವಣಿಗೆ ಎಂಬಂತೆ ಕಂಪನಿಯೊಂದರ ಕ್ರಮ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಹತಾಶೆ ಮತ್ತು ಕೋಪವನ್ನು ಉಂಟುಮಾಡಿದೆ. ಅದೇನೆಂದರೆ ಕಂಪನಿಯ ಉಳಿದ ಸಿಬ್ಬಂದಿಗಳಿಗೆ ಪಾಠ ಕಲಿಸಲೆಂದು ತನ್ನ ಕಂಪನಿಯಲ್ಲಿ ಅತ್ಯುತ್ತಮ ಕೆಲಸ ಮಾಡ್ತಿದ್ದ ಉದ್ಯೋಗಿಯೊಬ್ಬರನ್ನ ಕಂಪನಿ ವಜಾ ಮಾಡಿದೆ.
ಈ ಸುದ್ದಿಯನ್ನು ರೆಡ್ಡಿಟ್‌ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ. ಇದು ಭಾರೀ ಗಮನ ಸೆಳೆದಿದ್ದು ಟೀಕೆಗಳನ್ನು ಎದುರಿಸಿದೆ. ರೆಡ್ಡಿಟ್ ಬಳಕೆದಾರರ ಪ್ರಕಾರ ಕಂಪನಿಯು ತನ್ನ ವಿವೇಚನೆಯಿಂದ ಯಾರನ್ನಾದರೂ ವಜಾಗೊಳಿಸುವ ಸಾಮರ್ಥ್ಯ ಹೊಂದಿದೆ ಎಂದು ಸಿಬ್ಬಂದಿಗೆ ಅರ್ಥ ಮಾಡಿಸಲು ತನ್ನ ಉನ್ನತ-ಕಾರ್ಯನಿರ್ವಹಣೆಯ ಉದ್ಯೋಗಿಗಳಲ್ಲಿ ಒಬ್ಬರನ್ನು ವಜಾಗೊಳಿಸಿದೆ.
“ಪ್ರಾಮಾಣಿಕವಾಗಿ ಮೇಲಿನ ಆಡಳಿತವು ಕಾರ್ಮಿಕರಿಂದ ಕಮಿಷನ್ ಕದಿಯುವುದು, ಒಪ್ಪಂದದ ನಿಯಮಗಳನ್ನು ಗೌರವಿಸದಿರುವುದು, ನಾವು 5 ನಿಮಿಷಗಳಿಗಿಂತ ಹೆಚ್ಚು ಕಾಲ ಬಾತ್ ರೂಮ್‌ನಲ್ಲಿ ಕಳೆದರೆ ನಮಗೆ ಕಷ್ಟವನ್ನು ನೀಡುವುದು ಮತ್ತು ನಮಗೆ ಇಷ್ಟವಿಲ್ಲದಿದ್ದರೆ ಬಾಗಿಲು ತೆರೆದಿದೆ ಎಂದು ಹೇಳುವುದು ಸೇರಿದಂತೆ ಹಲವಾರು ವಿಷಯಗಳು ನನ್ನ ಪ್ರಸ್ತುತ ಕೆಲಸದಲ್ಲಿ ಕಡಿಮೆಯಾಗುತ್ತಿವೆ” ಎಂದು ರೆಡ್ಡಿಟರ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
“ಇನ್ನೊಂದು ದಿನ ಅವರು ನನ್ನನ್ನು ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದರು . ಇಂದು ಅವರು ಉತ್ತಮವಾಗಿ ಕೆಲಸ ಮಾಡ್ತಿದ್ದ ಸಹೋದ್ಯೋಗಿಯನ್ನ ವಜಾ ಮಾಡಿದ್ದಾರೆ” ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ.