ನವದೆಹಲಿ: ಸಾರ್ವತ್ರಿಕ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಅಂತಿಮ ಸಿದ್ದತೆ ಪರಿಶೀಲಿಸಿದೆ.
ಮಾರ್ಚ್ 13ರ ನಂತರ ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. 2014ರಲ್ಲಿ ಮಾರ್ಚ್ 5ರಂದು, 2019ರಲ್ಲಿ ಮಾರ್ಚ್ 10ರಂದು ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿತ್ತು. ಈ ಬಾರಿ ಮಾರ್ಚ್ 12 ಅಥವಾ 13ರಂದು ಇಲ್ಲವೇ ನಂತರ ಚುನಾವಣಾ ಆಯೋಗ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.
ಚುನಾವಣೆ ಸಿದ್ಧತೆ ಪರಿಶೀಲನೆಗಾಗಿ ಅನೇಕ ರಾಜ್ಯಗಳಿಗೆ ಆಯೋಗ ಭೇಟಿ ನೀಡುತ್ತಿದ್ದು, ಪ್ರಕ್ರಿಯೆ ಪೂರ್ಣಗೊಂಡ ಬಳಿಕ ದಿನಾಂಕ ಘೋಷಣೆ ಮಾಡಲಿದೆ. ಸದ್ಯ ತಮಿಳುನಾಡಿನಲ್ಲಿ ಚುನಾವಣಾ ಆಯೋಗ ಸಿದ್ದತಾ ಪರಿಶೀಲನೆ ಸಭೆ ನಡೆಸುತ್ತಿದೆ. ನಂತರ ಉತ್ತರ ಪ್ರದೇಶ, ಜಮ್ಮು ಕಾಶ್ಮೀರದಲ್ಲಿ ಪರಿಶೀಲನೆ ನಡೆಸಿ ದಿನಾಂಕ ಘೋಷಣೆ ಮಾಡಲಿದೆ ಎಂದು ಹೇಳಲಾಗಿದೆ.