ಬೆಂಗಳೂರು: ರಾಜ್ಯದ 150 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ದೇಶದ 50ಕ್ಕೂ ಅಧಿಕ ಪ್ರತಿಷ್ಠಿತ ಖಾಸಗಿ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿನ ಇಂಜಿನಿಯರಿಂಗ್ ಸೀಟುಗಳ ಪ್ರವೇಶಕ್ಕೆ 2024 -25 ನೇ ಸಾಲಿನ ಕಾಮೆಡ್ -ಕೆ ಯುಜಿಇಟಿ, ಯುನಿಗೇಜ್ ಪರೀಕ್ಷೆ ಮೇ 12ರಂದು ನಡೆಸಲಾಗುವುದು.
ಕಾಮೆಡ್ ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಸರ್ಕಾರದ ಜೊತೆಗಿನ ಒಪ್ಪಂದದ ಪ್ರಕಾರ ಖಾಸಗಿ ಕಾಲೇಜುಗಳಲ್ಲಿನ ಶೇಕಡ 45ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾದಡಿ ಹಂಚಿಕೆಗೆ ನೀಡಲಾಗುವುದು. ಇನ್ನುಳಿದ ಶೇಕಡ 55 ರಷ್ಟು ಸೀಟುಗಳ ಹಂಚಿಕೆಗೆ ಪ್ರತಿವರ್ಷದಂತೆ ಕಾಮೆಡ್ ಕೆ ಯುಜಿಇಟಿ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಗೆ ಫೆಬ್ರವರಿ 1ರಿಂದ ಏಪ್ರಿಲ್ 5ರವರೆಗೆ ನೋಂದಣಿಗೆ ಅವಕಾಶವಿದೆ. www.comedk.com, www.unigauge.com ವೆಬ್ ಸೈಟ್ ಮೂಲಕ ನೋಂದಣಿ ಮಾಡಿಸಬಹುದಾಗಿದೆ.