ಬೆಂಗಳೂರು: ಭಾನುವಾರ ನಡೆದ 2024ನೇ ಸಾಲಿನ ಯುಜಿಇಟಿ, ಯೂನಿಗೇಜ್ ಸಂಯೋಜಿತ ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ. ನಾಳೆ ಕೀ ಉತ್ತರ ಪ್ರಕಟಿಸಲಾಗುವುದು.
ರಾಜ್ಯದ 150 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ದೇಶದ 50ಕ್ಕೂ ಹೆಚ್ಚು ಖಾಸಗಿ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿನ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕೆ ಕಾಮೆಡ್ -ಕೆ ಪರೀಕ್ಷೆ ನಡೆಸಲಾಗಿದೆ. ದೇಶಾದ್ಯಂತ ಸುಸೂತ್ರವಾಗಿ ಪರೀಕ್ಷೆಗಳು ನಡೆದಿದೆ ಎಂದು ಕಾಮೆಡ್ -ಕೆ ತಿಳಿಸಿದೆ.
ಕರ್ನಾಟಕ ಸೇರಿ ದೇಶದ 28 ರಾಜ್ಯಗಳ 191 ನಗರಗಳ ಒಟ್ಟು 268 ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಪರೀಕ್ಷೆ ನಡೆಸಲಾಗಿದೆ. ನೋಂದಾಯಿತ 1.18 ಲಕ್ಷ ವಿದ್ಯಾರ್ಥಿಗಳಲ್ಲಿ 1.03 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಮೇ 14ರಂದು ತಾತ್ಕಾಲಿಕ ಕೀ ಉತ್ತರಗಳನ್ನು ಪ್ರಕಟಿಸಲಾಗುವುದು ಎಂದು ಹೇಳಲಾಗಿದೆ.