alex Certify ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗುತ್ತೆ ತಣ್ಣನೆಯ ಆಹಾರ; ಬಿಸಿ ಬಿಸಿ ತಾಜಾ ಊಟದಲ್ಲಿದೆ ಆರೋಗ್ಯದ ಗುಟ್ಟು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗುತ್ತೆ ತಣ್ಣನೆಯ ಆಹಾರ; ಬಿಸಿ ಬಿಸಿ ತಾಜಾ ಊಟದಲ್ಲಿದೆ ಆರೋಗ್ಯದ ಗುಟ್ಟು….!

ಊಟ-ಉಪಹಾರ ಯಾವುದೇ ಆಗಿರಲಿ, ಬಿಸಿ ಬಿಸಿಯಾಗಿದ್ದರೆ ರುಚಿ ಹೆಚ್ಚು. ಬಿಸಿಯಾದ ಆಹಾರ ಆರೋಗ್ಯಕ್ಕೆ ಕೂಡ ಒಳ್ಳೆಯದು. ಮನೆಯಲ್ಲಿರುವ ಹಿರಿಯರು ಕೂಡ ತಾಜಾ ಆಹಾರವನ್ನೇ ಸೇವಿಸುವಂತೆ ಸಲಹೆ ನೀಡುತ್ತಾರೆ. ಆದರೆ ವೇಗವಾಗಿ ಬದಲಾಗುತ್ತಿರುವ ಜೀವನಶೈಲಿಯಲ್ಲಿ ಬಿಸಿ ಊಟ ತಿನ್ನಲು ಜನರಿಗೆ ಸಮಯವಿಲ್ಲ.

ಹೆಚ್ಚಿನವರು ಮನೆಯಲ್ಲಿ ತಣ್ಣಗಾದ ಆಹಾರವನ್ನೇ ಬೇಗ ಬೇಗ ತಿಂದು ಮುಗಿಸಿ ಕೆಲಸಕ್ಕೆ ಹೊರಡುತ್ತಾರೆ. ಅದನ್ನು ಬಿಸಿಮಾಡುವುದು ಸಹ ಸೂಕ್ತವಲ್ಲ. ಅನೇಕರು ಬೆಳಗಿನ ಉಪಹಾರವನ್ನ ತಯಾರಿಸಿ ಫ್ರಿಜ್‌ನಲ್ಲಿ ಇಟ್ಟುಬಿಡುತ್ತಾರೆ. ನಂತರ ಬಿಸಿಮಾಡಿಕೊಂಡು ಅಥವಾ ಹಾಗೆಯೇ ಸೇವಿಸುತ್ತಾರೆ. ಈ ರೀತಿ ಮಾಡುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು.

ಬ್ಯಾಕ್ಟೀರಿಯಾದ ಅಪಾಯಆರೋಗ್ಯ ತಜ್ಞರ ಪ್ರಕಾರ ಬಿಸಿ ಆಹಾರದಲ್ಲಿ ಬ್ಯಾಕ್ಟೀರಿಯಾದ ಅಪಾಯವಿರುವುದಿಲ್ಲ. ಆದರೆ ತಣ್ಣನೆಯ ಆಹಾರದಲ್ಲಿ ಬ್ಯಾಕ್ಟೀರಿಯಾಗಳ ಸಂಖ್ಯೆ ವೇಗವಾಗಿ ಹೆಚ್ಚಾಗುವ ಅಪಾಯವಿದೆ, ಇದು ಆರೋಗ್ಯಕ್ಕೆ ಅಪಾಯಕಾರಿ.ಅಷ್ಟೇ ಅಲ್ಲ ತಣ್ಣನೆಯ ತಿನಿಸು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ತಣ್ಣನೆಯ ಆಹಾರವನ್ನು ಸೇವಿಸುವವರು ಸಾಮಾನ್ಯವಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಾರೆ. ಬಿಸಿಯಾದ ಆಹಾರ ಸೇವಿಸುವವರು ಇಂತಹ ಸಮಸ್ಯೆಗಳನ್ನು ಎದುರಿಸುವುದು ಬಹಳ ಅಪರೂಪ.

ಚಯಾಪಚಯ ದುರ್ಬಲವಾಗುತ್ತದೆತಣ್ಣನೆಯ ಆಹಾರವನ್ನು ಸೇವಿಸುವುದರಿಂದ ನಮ್ಮ ಚಯಾಪಚಯವು ದುರ್ಬಲವಾಗುತ್ತದೆ. ಇದರಿಂದಾಗಿ ಅವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಆಹಾರವನ್ನು ಯಾವಾಗಲೂ ತಾಜಾ ಮತ್ತು ಬಿಸಿಯಾಗಿ ಸೇವಿಸಬೇಕು.

ಹೊಟ್ಟೆಯಲ್ಲಿ ಗ್ಯಾಸ್‌ ಮತ್ತು ಉಬ್ಬರಿಸುವಿಕೆ – ತಣ್ಣನೆಯ ಆಹಾರವನ್ನು ಸೇವಿಸುವುದರಿಂದ ಹೊಟ್ಟೆ ಉಬ್ಬರಿಸುತ್ತದೆ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ. ಇದರಿಂದಾಗಿ ಕಾರ್ಬೋಹೈಡ್ರೇಟ್ಗಳು ಕರುಳಿನಲ್ಲಿ ಹುದುಗುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...