
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಅಡುಗೆ ಎಣ್ಣೆ ದರ ಏರಿಕೆಯಾಗುತ್ತಿದೆ.
ಖಾದ್ಯ ತೈಲಬೆಲೆ ಏರಿಕೆ ಆಗಿರುವುದು ಬಡ, ಮಧ್ಯಮ ವರ್ಗದವರಿಗೆ ಸಂಕಷ್ಟ ತಂದಿದೆ. ಕೊಬ್ಬರಿ ಎಣ್ಣೆ ದರ ಲೀಟರ್ ಗೆ 300 ರೂ. ಗಡಿ ದಾಟಿದೆ. ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಕೊಯ್ಲು, ಮಾರಾಟ ನಡೆಯುತ್ತಿದೆ. ಹೀಗಾಗಿ ತೆಂಗಿನ ಕಾಯಿ ಪೂರೈಕೆ ಪ್ರಮಾಣ ಕಡಿಮೆಯಾಗಿದೆ. ಇದರ ಪರಿಣಾಮ ತೆಂಗಿನ ಎಣ್ಣೆಯ ಮೇಲೆ ಬಿದ್ದಿದೆ. 15 ಕೆಜಿ ಕೊಬ್ಬರಿ ಎಣ್ಣೆ ದರ 4,600 ರೂ. ಆಗಿದೆ.
ಈ ಬಾರಿ ಫೆಬ್ರವರಿಯಿಂದಲೇ ತಾಪಮಾನ ಹೆಚ್ಚಾಗಿ ಎಳನೀರು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಇದರ ಜೊತೆ ಕೊಬ್ಬರಿ ದರ ಕೂಡ ಏರಿಕೆಯಾಗಿದೆ. ಖಾದ್ಯ ತೈಲಗಳಾದ ಸೂರ್ಯಕಾಂತಿ, ಪಾಮ್ ಆಯಿಲ್, ಕಡಲೆಕಾಯಿ ಸೇರಿ ಹಲವು ಎಣ್ಣೆಗಳ ದರಗೆ 10 ರಿಂದ 20 ರೂಪಾಯಿಯಷ್ಟು ಹೆಚ್ಚಾಗಿದೆ. ಇದೀಗ ತೆಂಗಿನ ಎಣ್ಣೆ ದರ ಕೂಡ 300 ರೂ. ಗಡಿ ದಾಟಿದೆ.