ಚಿಕನ್ ಬಿರಿಯಾನಿಯಲ್ಲಿ ಜಿರಳೆ…! ರೆಸ್ಟೋರೆಂಟ್‌ ಗೆ ದಂಡ, ಗ್ರಾಹಕನಿಗೆ 20 ಸಾವಿರ ರೂ. ಪರಿಹಾರ

ಹೈದರಾಬಾದ್: ಹೈದರಾಬಾದ್‌ ನ ಅಮೀರ್‌ಪೇಟ್‌ನ ರೆಸ್ಟೋರೆಂಟ್‌ ನಿಂದ ಖರೀದಿಸಿದ ಬಿರಿಯಾನಿಯಲ್ಲಿ ಗ್ರಾಹಕರೊಬ್ಬರು ಜಿರಳೆ ಹರಿದಾಡುತ್ತಿರುವುದನ್ನು ಕಂಡ ಆಘಾತಕಾರಿ ಘಟನೆ ನಡೆದಿದೆ.

ಅವರ ದೂರನ್ನು ಪರಿಗಣಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಗ್ರಾಹಕರಿಗೆ ಪರಿಹಾರವಾಗಿ 20,000 ರೂ. ನೀಡುವಂತೆ ರೆಸ್ಟೋರೆಂಟ್‌ ಗೆ ಆದೇಶಿಸಿದೆ.

ಈ ಘಟನೆಯು ಸೆಪ್ಟೆಂಬರ್ 2021 ರಲ್ಲಿ ನಡೆದಿದ್ದು, ಎಂ. ಅರುಣ್ ಅವರು ಅಮೀರಪೇಟ್‌ ನಲ್ಲಿರುವ ಕ್ಯಾಪ್ಟನ್ ಕುಕ್ ರೆಸ್ಟೋರೆಂಟ್‌ನಿಂದ ಚಿಕನ್ ಬಿರಿಯಾನಿ ಟೇಕ್‌ ಅವೇ ಪಾರ್ಸೆಲ್ ಅನ್ನು ಆರ್ಡರ್ ಮಾಡಿ ಪಡೆದಿದ್ದರು. ತನ್ನ ಕೆಲಸದ ಸ್ಥಳವನ್ನು ತಲುಪಿದಾಗ ಆಹಾರದಿಂದ ಜಿರಳೆ ತೆವಳುತ್ತಿರುವುದನ್ನು ಕಂಡು ಅವರು ಆಘಾತಕ್ಕೊಳಗಾದರು.

ಅವರು ಸಮಸ್ಯೆಯನ್ನು ವರದಿ ಮಾಡಲು ತಕ್ಷಣ ರೆಸ್ಟೋರೆಂಟ್ ಅನ್ನು ಸಂಪರ್ಕಿಸಿದರು, ಆದರೆ ಮ್ಯಾನೇಜರ್‌ನಿಂದ ಕ್ಷಮೆ ಮಾತ್ರ ಕೇಳಿದ್ದು, ಕ್ಷಮಾಪಣೆಯಿಂದ ತೃಪ್ತರಾಗದ ಅರುಣ್ ಜಿಲ್ಲಾ ವೇದಿಕೆಗೆ ದೂರು ಸಲ್ಲಿಸಿದರು.

ವಿಚಾರಣೆಯ ಸಮಯದಲ್ಲಿ, ರೆಸ್ಟೋರೆಂಟ್ ಆರೋಪಗಳನ್ನು ನಿರಾಕರಿಸಿತು ಮತ್ತು ಆಹಾರವು ತಾಜಾ ಮತ್ತು ಬಿಸಿಯಾಗಿರುತ್ತದೆ, ಆ ತಾಪಮಾನದಲ್ಲಿ ಕೀಟವು ಬದುಕಲು ಅಸಾಧ್ಯವೆಂದು ವಾದಿಸಿತು.

ಆದಾಗ್ಯೂ, ಶುಚಿತ್ವ ಮತ್ತು ನೈರ್ಮಲ್ಯ ಮಾನದಂಡಗಳನ್ನು ಕಾಪಾಡಿಕೊಳ್ಳಲು ವಿಫಲವಾದ ರೆಸ್ಟೋರೆಂಟ್ ಮಾಲೀಕರನ್ನು ಆಯೋಗವು ತಪ್ಪಿತಸ್ಥರೆಂದು ಕಂಡುಹಿಡಿದಿದೆ. ಆಹಾರದಿಂದ ಜಿರಳೆ ತೆವಳುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಅರುಣ್ ಪ್ರಸ್ತುತಪಡಿಸಿದ್ದರು, ಅದು ಅವರ ಹೇಳಿಕೆಯನ್ನು ಬೆಂಬಲಿಸಿತು.

ಆಯೋಗವು ಕ್ಯಾಪ್ಟನ್ ಕುಕ್ ರೆಸ್ಟೊರೆಂಟ್‌ಗೆ 20,000 ರೂ.ಗಳನ್ನು ಅರುಣ್‌ಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿತು ಮತ್ತು ವಿಚಾರಣೆಯ ಸಮಯದಲ್ಲಿ ತಗಲುವ ವೆಚ್ಚವನ್ನು ಭರಿಸಲು ಹೆಚ್ಚುವರಿಯಾಗಿ 10,000 ರೂ. ನೀಡಲು ತಿಳಿಸಿದೆ. ದಂಡವನ್ನು 45 ದಿನಗಳಲ್ಲಿ ಪಾವತಿಸಬೇಕು ಎಂದು ಆಯೋಗ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read