BIG NEWS: ರಾಜ್ಯದಲ್ಲಿ ಹೆದ್ದಾರಿ ಸಂಪರ್ಕ ಜಾಲ ಅಭಿವೃದ್ಧಿಗೆ ನಿತಿನ್ ಗಡ್ಕರಿಗೆ ಸಿದ್ಧರಾಮಯ್ಯ ಮನವಿ: ಇಲ್ಲಿದೆ ವಿವರ

ನವದೆಹಲಿ: ದೆಹಲಿಯಲ್ಲಿ ಇಂದು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಿಎಂ ಸಿದ್ಧರಾಮಯ್ಯ ಅವರು ರಾಜ್ಯದಲ್ಲಿ ಬಾಕಿ ಉಳಿದಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಬಗ್ಗೆ ಚರ್ಚೆ ನಡೆಸಿ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಡಾ. ಹೆಚ್. ಸಿ. ಮಹಾದೇವಪ್ಪ, ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಹಾಜರಿದ್ದರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಅವರಿಗೆ ನೀಡಿದ ಮನವಿ ಪತ್ರದ ವಿವರ ಹೀಗಿದೆ.

ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂರ್ಪಕ ಜಾಲವನ್ನು ವೃದ್ಧಿಸಲು ಸಹಕಾರ ನೀಡುತ್ತಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಕರ್ನಾಟಕ ರಾಜ್ಯದ ಪರವಾಗಿ ಅಭಿನಂದಿಸುತ್ತೇನೆ. ಕೇಂದ್ರದಿಂದ ರಾಜ್ಯಕ್ಕೆ ಮಂಜೂರಾಗಿರುವ ಕೆಳಕಂಡ ಪ್ರಮುಖ ಯೋಜನೆಗಳ ವಿವರ ಇಂತಿದೆ.

ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಮಣಿಪಾಲ್ ಆಸ್ಪತ್ರೆ ಜಂಕ್ಷನ್ (ಮೈಸೂರು ನಗರ)ದಲ್ಲಿ ಫ್ಲೈಓವರ್ ನಿರ್ಮಾಣ.

30.35 ಕಿ.ಮೀ. ಉದ್ದದ ಹುಬ್ಬಳ್ಳಿ ಧಾರವಾಡ ಷ್ಟಪಥ ಬೈಪಾಸ್ ನಿರ್ಮಾಣ

ರಾ.ಹೆ 369 ಇ( ಸಿಗಂದೂರು ಸೇತುವೆ) ರಲ್ಲಿ ಶರಾವತಿ ಹಿನ್ನೀರಿನ ಮೇಲೆ ಪ್ರಮುಖ ಸೇತುವೆ ನಿರ್ಮಾಣ.

ರಾ.ಹೆ.167 ಹಗರಿ-ಜೆಡ್ಚೆರ್ಲಾ ಸೆಕ್ಷನ್ ನಲ್ಲಿ ಕೃಷ್ಣಾ ನದಿ ಮೇಲೆ 180.865 ಕಿ.ಮೀ.ನಲ್ಲಿ ಪ್ರಮುಖ ಸೇತುವೆ ನಿರ್ಮಾಣ.

ಹೊಸಪೇಟೆಯಿಂದ ಬಳ್ಳಾರಿ ಸೆಕ್ಷನ್ ನ ಹಳೆಯ ರಾ.ಹೆ-63(ಹೊಸ ರಾ.ಹೆ-67) ನ ಕಿ.ಮಿ.340+640(ಬಳ್ಳಾರಿ ನಗರ ಮಿತಿಯಲ್ಲಿನ ಸುಧಾ ಕ್ರಾಸ್) ನಲ್ಲಿ LC-110E ಬದಲಿಗೆ 2-ಲೇನ್ ROB ನಿರ್ಮಾಣ.

ರಾ.ಹೆ.150ಎ ರಲ್ಲಿನ ಸಿಂದಿಗೆರಿ-ಬಳ್ಳಾರಿ ಸೆಕ್ಷನ್ನ ಕಿ.ಮೀ.235.00 ರಿಂದ 254.800ವರೆಗೆ Two Lane with Paved Shoulders ಗೆ ಅಗಲೀಕರಣ ಯೋಜನೆ.

ಕರ್ನಾಟಕ ಸರ್ಕಾರವು ರಾಜ್ಯದ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಜಾಲದ ಅಭಿವೃದ್ಧಿಯನ್ನು ಬೆಂಬಲಿಸುತ್ತಿದ್ದು, ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗಳನ್ನು ಚುರುಕುಗೊಳಿಸಲು ಕಂದಾಯ ಇಲಾಖೆಯೊಂದಿಗೆ ಹಾಗೂ ಅರಣ್ಯ ತೀರುವಳಿ ಪ್ರಕ್ರಿಯೆ ತ್ವರಿತಗೊಳಿಸಲು ಅರಣ್ಯ ಇಲಾಖೆಯೊಂದಿಗೆ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸುತ್ತಿದೆ. ನೀರು ಹಾಗೂ ವಿದ್ಯುತ್ ಸಂಪರ್ಕ ಸೇರಿದಂತೆ Utility Shifting ಕಾರ್ಯವನ್ನು ಚುರುಕುಗೊಳಿಸಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆ ನಡೆಸುವ ಮೂಲಕ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ  ಆದ್ಯತೆ ನೀಡಲಾಗಿದೆ.

10,000 ಪಿ.ಯು.ಸಿ ಗಿಂತಲೂ ಸಂಚಾರ ತೀವ್ರತೆ ಹೆಚ್ಚಿರುವ ಇರುವ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು  ಹಾಗೂ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಗಾಗಿ ಈ ಕೆಳಕಂಡ ಯೋಜನೆಗಳನ್ನು ಮಂಜೂರು ಮಾಡಬೇಕೆಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವರಲ್ಲಿ ಕರ್ನಾಟಕ ಸರ್ಕಾರದ ಪರವಾಗಿ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಮೈಸೂರಿನ ರಾಷ್ಟ್ರೀಯ ಹೆದ್ದಾರಿ -275ರಲ್ಲಿ 9 ಗ್ರೇಡ್ ಸಪರೇಟರ್ಗಳ ನಿರ್ಮಾಣ.

ರಾಷ್ಟ್ರೀಯ ಹೆದ್ದಾರಿ -75 (ಹಳೆಯ ರಾ.ಹೆ 48) ರ ಶಿರಾಡಿ ಘಾಟ್ ನ 237+000 ರಿಂದ 263+000(ಮಾರನಹಳ್ಳಿಯಿಂದ ಅಡ್ಡಹೊಳೆ ಸೆಕ್ಷನ್)  ವರೆಗೆ ಸುರಂಗ ನಿರ್ಮಾಣ ಮಾಡುವ ಮೂಲಕ  ಮಂಗಳೂರು ಬಂದರು(ದೇಶದ 7 ನೇ ಅತಿ ದೊಡ್ಡ ಬಂದರು) ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನ ನಡುವೆ  ಸಂಪರ್ಕವನ್ನು ಸುಧಾರಿಸುವುದು.

ಪುಣೆ- ಬೆಂಗಳೂರು ಗ್ರೀನ್ ಫೀಲ್ಡ್ ಎಕ್ಸ್ ಪ್ರೆಸ್ ವೇ ನ್ನು ಶೀಘ್ರವಾಗಿ ಮಂಜೂರು ಮಾಡುವುದು.

ಮುಂಬರಲಿರುವ ವಾರ್ಷಿಕ ಯೋಜನೆ 2025-26 ರಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು 24000 ಕೋಟಿಗಳಿಗೆ ಹೆಚ್ಚಿಸಿ ಮಂಜೂರು ಮಾಡುವುದು.

ಬೆಂಗಳೂರು ನಗರದ ಹೆಬ್ಬಾಳ ಜಂಕ್ಷನ್ ನ ರಾಷ್ಟ್ರೀಯ ಹೆದ್ದಾರಿ- 44 ರಲ್ಲಿ ಮೇಲ್ಸೇತುವೆ ನಿರ್ಮಾಣ.

ತಾತ್ವಿಕವಾಗಿ ಘೋಷಿತವಾಗಿರುವ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಆದ್ಯತೆ ಮೇಲೆ  ಮೇಲ್ದರ್ಜೆಗೇರಿಸುವುದು.

ಬೆಂಗಳೂರು ನಗರದಲ್ಲಿ ಮೈಸೂರು ರಸ್ತೆಯನ್ನು ಸಂಪರ್ಕಿಸುವ ಸುರಂಗದ ನಿರ್ಮಾಣ( ರಾ.ಹೆ- 275) ಮತ್ತು ಹೊಸೂರು ರಸ್ತೆ  ( ರಾ.ಹೆ-48 ಮತ್ತು ರಾ.ಹೆ-75) ( ಎಲೆಕ್ಟ್ರಾನಿಕ್ ಸಿಟಿ) ಮಾರ್ಗವಾಗಿ ತುಮಕೂರು ರಸ್ತೆ (ರಾ.ಹೆ-48), ಬಳ್ಳಾರಿ ರಸ್ತೆ ( ರಾ.ಹೆ-44) ಮತ್ತು ಹಳೆ ಮದ್ರಾಸು ರಸ್ತೆ ( ಹಳೆ ರಾ.ಹೆ -4)

ಬೆಳಗಾವಿ ನಗರ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಬೆಳಗಾವಿ ನಗರದ ರಾ.ಹೆ-4 ರಲ್ಲಿ  ಎಲಿವೇಟೆಡ್ ಕಾರಿಡಾರ್ ನಿರ್ಮಾಣ

ಕಲಬುರ್ಗಿ-ವಾಡಿ-ಯಾದಗಿರಿ-ಕೆಂದೆಚೂರ್-ಜಡ್ ಚೇರ್ಲಾ ವಿಭಾಗದಲ್ಲಿ ಚತುಷ್ಪಥ ರಸ್ತೆ ನಿರ್ಮಿಸಿ ರಸ್ತೆ ಅಗಲೀಕರಣ ಕೈಗೊಳ್ಳುವುದು.

ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ರಾ.ಹೆ 150ಎ ( ಜೇವರ್ಗಿ- ಚಾಮರಾಜನಗರ ವಿಭಾಗ) ರಲ್ಲಿ ಭೀಮರಾಯನಗುಡಿ ಮತ್ತು ಶಹಾಪುರ ಪಟ್ಟಣಕ್ಕೆ  2 ಎಲ್+ ಪಿಎಸ್ ಗ್ರೀನ್ ಫೀಲ್ಡ್  ಸಂಯೋಜಿತ ಬೈಪಾಸ್ ನಿರ್ಮಾಣ

ಕರ್ನಾಟಕ ರಾಜ್ಯದಲ್ಲಿ ಎಸ್.ಪಿ.ಯು.ಆರ್. ಅಡಿಯಲ್ಲಿ  ರಾ.ಹೆ-752ಕೆ ನಿಂದ ರಾ.ಹೆ -65 ವರೆಗೆ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸುವುದು

ಕರ್ನಾಟಕ ರಾಜ್ಯದಲ್ಲಿ ಎಸ್.ಪಿ.ಯು.ಆರ್. ಅಡಿಯಲ್ಲಿ ದೇವಲ್ ಗಾಣಗಾಪುರದಿಂದ ಪಂಡರಾಪುರವರೆಗಿನ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸುವುದು

ಈ ಎಲ್ಲಾ ಪ್ರಸ್ತಾವನೆಗಳನ್ನು ಪರಿಗಣಿಸಿ ಮಂಜೂರಾತಿಗಳನ್ನು ನೀಡಲು ಸಂಬಂಧಿಸಿದವರಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಕೋರಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read