
ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇರುವವರೆಗೆ ಮಾತ್ರ ಮುಸ್ಲಿಮರಿಗೆ ಭವಿಷ್ಯವಿದೆ. ಅವರು ಇರುವುದರೊಳಗೆ ನಾವು ಏನಾದರೂ ಮಾಡಿಕೊಳ್ಳಬೇಕು. ನಂತರ ನಮಗೆ ಚೊಂಬೇ ಗತಿಯಾಗುತ್ತದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಶನಿವಾರ ನಡೆದ ಸ್ವಾತಂತ್ರ್ಯ ಹೋರಾಟಗಾರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ ಆರು ತಿಂಗಳಿಗೆ ಒಮ್ಮೆ ಹೋಗಿ ನಮ್ಮ ಸಮಾಜಕ್ಕೆ ನೂರಾರು ಕೋಟಿ ರೂಪಾಯಿ ಅನುದಾನ ತಂದು ಕೆಲಸ ಮಾಡಿಸಿಕೊಳ್ಳಬೇಕು. ಸಿದ್ದರಾಮಯ್ಯ ಅಧಿಕಾರದಲ್ಲಿ ಇರುವುದರ ಒಳಗೆ ಏನಾದರೂ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ನನಗೆ ಸಿದ್ದರಾಮಯ್ಯ ಮಾತ್ರ ನಾಯಕ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಕೂಡ ನಾನು ನಾಯಕರು ಎಂದು ಒಪ್ಪಿಕೊಂಡಿಲ್ಲ. ನನ್ನನ್ನು ಶಾಸಕ ಹಾಗೂ ಸಚಿವರನ್ನಾಗಿ ಮಾಡಿದ್ದು ಸಿದ್ದರಾಮಯ್ಯ. ಅವರು ಅಧಿಕಾರದಲ್ಲಿರುವುದರ ಒಳಗೆ ನಾವು ಏನಾದರೂ ಮಾಡಿಕೊಳ್ಳಬೇಕು. ನಂತರ ನಮಗೆ ಚೊಂಬೇ ಗತಿಯಾಗುತ್ತದೆ ಎಂದು ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.