ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಯನ್ನೇ ಜಾತ್ಯಾತೀತ ಅಂದುಕೊಂಡಿದ್ದಾರೆ : ಬಿಜೆಪಿ ವಾಗ್ಧಾಳಿ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಯನ್ನೇ ಜಾತ್ಯಾತೀತ ಎಂದುಕೊಂಡಿದ್ದಾರೆ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಜಾತ್ಯಾತೀತ ಎಂದರೆ ಆಡಳಿತದಲ್ಲಿ ಧರ್ಮ ನಿರಪೇಕ್ಷತೆ. ಆದರೆ ಸಿದ್ದರಾಮಯ್ಯ ಅವರು ಹಿಂದುತ್ವದ ಅವಹೇಳನ ಮತ್ತು ಅಲ್ಪಸಂಖ್ಯಾತರ ಓಲೈಕೆಯನ್ನೇ ಜಾತ್ಯಾತೀತ ಎಂದುಕೊಂಡಿದ್ದಾರೆ. ದಲಿತರ ಶ್ರೇಯೋಭಿವೃದ್ಧಿಗೆ ಮೀಸಲಿದ್ದ ಹಣವನ್ನೂ ಒಂದು ಸಮುದಾಯದ ತುಷ್ಟೀಕರಣಕ್ಕೆ ಬಳಸಿಕೊಳ್ಳುತ್ತಿರುವುದು ದಲಿತ ವರ್ಗಕ್ಕೆ ಸಿದ್ದರಾಮಯ್ಯರವರು ಮಾಡುತ್ತಿರುವ ಘನಘೋರ ಅನ್ಯಾಯ. ಬರದಿಂದ ತತ್ತರಿಸಿ, ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿರುವ ಈ ಸಂದರ್ಭದಲ್ಲೂ ಸಾವಿರ ಕೋಟಿ ಬಿಡುಗಡೆ ಮಾಡಿರುವುದಲ್ಲದೇ, ಒಟ್ಟು ₹10,000 ಕೋಟಿ ದಲಿತರ ಹಣವನ್ನು ಇದಕ್ಕಾಗಿ ಮೀಸಲಿಟ್ಟು ತಮ್ಮದು ಸೋಗಲಾಡಿತನದ ದಲಿತಪ್ರೇಮ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.

https://twitter.com/BJP4Karnataka/status/1740992702613975042

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read