ಬೆಂಗಳೂರು : ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಜನತಾ ದರ್ಶನ ಆರಂಭವಾಗಿದ್ದು, ವಿಶೇಷ ಚೇತನರು ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೌಂಟರ್ ಆರಂಭಿಸಲಾಗಿದೆ.
ಸರತಿ ಸಾಲಿನಲ್ಲಿ ಜನರು ಬಂದು ಅಹವಾಲು ಸಲ್ಲಿಸುತ್ತಿದ್ದು, ಕಚೇರಿ ಮುಂಭಾಗ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. 20 ಕ್ಕೂ ಹೆಚ್ಚು ಕೌಂಟರ್ ಗಳನ್ನು ಸ್ಥಳದಲ್ಲಿ ಓಪನ್ ಮಾಡಲಾಗಿದ್ದು, 100 ಕ್ಕೂ ಹೆಚ್ಚು ಅಧಿಕಾರಿಗಳು. ವೈದ್ಯರ ತಂಡ ಸ್ಥಳದಲ್ಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಜನರ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಪರಿಹರಿಸಲಿದ್ದಾರೆ. ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ದೂರುಗಳನ್ನು ನೇರವಾಗಿ ಸಲ್ಲಿಸಬಹುದಾಗಿದೆ.