ಇತ್ತೀಚಿನ ದಿನಗಳಲ್ಲಿ ಆರೋಗ್ಯಕರ ಆಹಾರ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಯಾವ ಸಮಯದಲ್ಲಿ, ಯಾವ ಆಹಾರ ಸೇವನೆ ಮಾಡಬೇಕೆಂಬ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ನೀವೂ ಆರೋಗ್ಯಕರ ಆಹಾರ ಸೇವನೆ ಮಾಡುವವರಲ್ಲಿ ಒಬ್ಬರಾಗಿದ್ದರೆ, ಬೆಳಗಿನ ಉಪಹಾರಕ್ಕೆ ಕ್ಲಬ್ ಸ್ಯಾಂಡ್ವಿಚ್ ಮಾಡಿ, ಸೇವನೆ ಮಾಡಬಹುದು.
ಕ್ಲಬ್ ಸ್ಯಾಂಡ್ವಿಚ್ ಗೆ ಬೇಕಾಗುವ ಪದಾರ್ಥ :
4 ಬ್ರೌನ್ ಬ್ರೆಡ್
ರೋಸ್ಟ್ ಮಾಡಲು ಬೆಣ್ಣೆ ಅಥವಾ ತುಪ್ಪ
ತುರಿದ ಒಂದು ಕಪ್ ಕ್ಯಾರೆಟ್
ಸ್ವಲ್ಪ ಸಣ್ಣಗೆ ಹೆಚ್ಚಿನದ ಎಲೆಕೋಸು
ನುಣ್ಣಗೆ ಕತ್ತರಿಸಿದ ಕ್ಯಾಪ್ಸಿಕಂ
ಕತ್ತರಿಸಿದ 2 ಟೊಮ್ಯಾಟೊ
ಕತ್ತರಿಸಿದ ಸೌತೆಕಾಯಿ
4 ಚೀಸ್ ಚೂರು
1/4 ಕಪ್ ಸ್ಯಾಂಡ್ವಿಚ್ ಸ್ಪ್ರೆಡ್
ಕಾಳು ಮೆಣಸಿನ ಪುಡಿ
ಕ್ಲಬ್ ಸ್ಯಾಂಡ್ವಿಚ್ ಮಾಡುವ ವಿಧಾನ : ಮೊದಲು ಬ್ರೆಡ್‌ನ ಬದಿಗಳನ್ನು ಕತ್ತರಿಸಿ. ನಂತ್ರ ಬ್ರೆಡ್ ರೋಸ್ಟ್ ಮಾಡಿ ಬದಿಗಿಡಿ. ಇನ್ನೊಂದು ಪಾತ್ರೆಗೆ ಕತ್ತರಿಸಿದ ಕ್ಯಾರೆಟ್, ಕ್ಯಾಪ್ಸಿಕಂ, ಎಲೆಕೋಸು, ಉಪ್ಪು, ಕಾಳು ಮೆಣಸಿನ ಪುಡಿ ಮತ್ತು ಸ್ಯಾಂಡ್ವಿಚ್ ಸ್ಪ್ರೆಡ್ ಬೆರೆಸಿ. ನಂತ್ರ, ರೋಸ್ಟ್ ಆಗಿರುವ ಬ್ರೆಡ್ ಮೇಲೆ ಬೆಣ್ಣೆ ಅಥವಾ ತುಪ್ಪ ಹಚ್ಚಿ. ಅದ್ರ ಮೇಲೆ ಟೊಮೆಟೊ ಚೂರುಗಳನ್ನು ಇಡಿ.
ಚೀಸ್ ಪೀಸ್ ಗಳನ್ನು ಅದರ ಮೇಲಿಡಿ. ಇದ್ರ ಮೇಲೆ ಬೆಣ್ಣೆ ಹಾಕಿ, ಇನ್ನೊಂದು ಬ್ರೆಡ್ ಇಡಿ. ನಂತ್ರ ಆ ಬ್ರೆಡ್ ಇನ್ನೊಂದು ಭಾಗಕ್ಕೆ ಬೆಣ್ಣೆ ಹಚ್ಚಿ, ನಂತ್ರ ಚೀಸ್ ಹಾಕಿ. ನಂತ್ರ ಸ್ಯಾಂಡ್ವಿಚ್ ನ್ನು ತ್ರಿಕೋನಾಕಾರದಲ್ಲಿ ಕತ್ತರಿಸಿ. ಇದನ್ನು ಕೊತ್ತಂಬರಿ ಚಟ್ನಿಯೊಂದಿಗೆ ತಿನ್ನಬಹುದು.