ಚೀನೀ ಮಹಿಳೆಯೊಬ್ಬಳು ಪಾಕಿಸ್ತಾನೀ ಮಹಿಳೆಯೊಬ್ಬಳಿಗೆ ಹಾಡಹಗಲೇ ಪಾಕಿಸ್ತಾನದ ಬೀದಿಯೊಂದರಲ್ಲಿ ಕೂದಲೆಳೆದು ಆಕೆಯ ಹೊಟ್ಟೆಗೆ ಒದೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆಯನ್ನು ಅನೇಕರು ನೋಡುತ್ತಿದ್ದರೂ ಸಹ ಏನೂ ಮಾಡಲಾಗದೇ ಅಸಹಾಯಕರಾಗಿ ನಿಂತಿದ್ದಾರೆ.
“21ನೇ ಶತಮಾನದ ವಸಾಹತುಶಾಹಿತನ ಹೇಗೆ ಕಾಣುತ್ತದೆ ಎಂದು ನೋಡಬೇಕೇ? ಪಾಕಿಸ್ತಾನದ ಬೀದಿಯೊಂದರಲ್ಲಿ ಚೀನೀ ಮಹಿಳೆಯೊಬ್ಬಳು ಪಾಕಿಸ್ತಾನೀ ಮಹಿಳೆ ಮೇಲೆ ಹಲ್ಲೆ ಮಾಡುತ್ತಿದ್ದಾಳೆ ಹಾಗೂ ಯಾವುದೇ ಪಾಕಿಸ್ತಾನೀ ಇದರಲ್ಲಿ ಮಧ್ಯ ಪ್ರವೇಶಿಸಲು ಧೈರ್ಯ ತೋರುತ್ತಿಲ್ಲ. ತಮ್ಮ ಹೃದಯಗಳಲ್ಲಿ ಚೀನೀಯರಿಗೆ ದಾಸ್ಯತನವನ್ನು ಒಪ್ಪಿಕೊಂಡಿದ್ದಾರೆ,” ಎಂದು ವಿಡಿಯೋ ಶೇರ್ ಮಾಡಿದ ಸಾಜೆದಾ ಅಖ್ತರ್ ಎಂಬಾಕೆ ಹೇಳಿಕೊಂಡಿದ್ದಾರೆ.
ಅಕ್ಕಪಕ್ಕದಲ್ಲಿ ನೆರೆದ ಪುರುಷರು ಸಂತ್ರಸ್ತೆಯನ್ನು ಬಿಟ್ಟುಬಿಡುವಂತೆ ಚೀನೀ ಮಹಿಳೆಗೆ ಕೇಳಿಕೊಂಡರೂ ಸಹ ಆಕೆ ತನ್ನ ಅಬ್ಬರ ಮುಂದುವರೆಸಿದ್ದಾಳೆ.
ತನ್ನ ವಸ್ತುವನ್ನು ಮರಳಿ ಕೊಡಲು ಪಾಕ್ ಮಹಿಳೆಗೆ ಚೀನೀ ಮಹಿಳೆ ಆಗ್ರಹಿಸುತ್ತಿರುವುದನ್ನು ನೋಡಿದರೆ ಬಹುಶಃ ಆಕೆಯ ವ್ಯಾಲೆಟ್‌ಅನ್ನು ಈಕೆ ಕದ್ದಿರಬಹುದು ಎಂಬ ಸಂಶಯವನ್ನು ನೆಟ್ಟಿಗರೊಬ್ಬರು ಕಾಮೆಂಟ್‌ನಲ್ಲಿ ವ್ಯಕ್ತಪಡಿಸಿದ್ದಾರೆ.
https://twitter.com/Sajeda_Akhtar/status/1663085484514394112?ref_src=twsrc%5Etfw%7Ctwcamp%5Etweetembed%7Ctwterm%5E16630854845
https://twitter.com/Sajeda_Akhtar/status/1663085484514394112?ref_src=twsrc%5Etfw%7Ctwcamp%5Etweetembed%7Ctwterm%5E1663369366484795392%7Ctwgr%5E5b634877db6d41cd1067b07ee14daa4f8ec07267%7Ctwcon%5Es2_&ref_url=https%3A%2F%2Fwww.freepressjournal.in%2Fworld%2Fchinese-woman-beats-pakistani-woman-in-broad-daylight-no-one-dares-to-stop-her-watch-viral-video
https://twitter.com/Sajeda_Akhtar/status/1663085484514394112?ref_src=twsrc%5Etfw%7Ctwcamp%5Etweetembed%7Ctwterm%5E1663292250481364992%7Ctwgr%5E5b634877db6d41cd1067b07ee14daa4f8ec07267%7Ctwcon%5Es2_&ref_url=https%3A%2F%2Fwww.freepressjournal.in%2Fworld%2Fchinese-woman-beats-pakistani-woman-in-broad-daylight-no-one-dares-to-stop-her-watch-viral-video