
ಬೀಜಿಂಗ್: ಚೀನಾದ ದಕ್ಷಿಣ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಹೆದ್ದಾರಿ ಕುಸಿತದದಲ್ಲಿ ಮೃತಪಟ್ಟವರ ಸಂಖ್ಯೆ 36 ಕ್ಕೆ ಏರಿದೆ, ಹಲವಾರು ಕಾರ್ ಗಳು ಇಳಿಜಾರಿನಲ್ಲಿ ಉರುಳಿ ಬಿದ್ದಿವೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ, ಗುವಾಂಗ್‌ಡಾಂಗ್‌ನ ಮೀಝೌ ನಗರದಲ್ಲಿ ಹೆದ್ದಾರಿಯ 17.9-ಮೀಟರ್ ಉದ್ದದ ಭಾಗವು ಕುಸಿದ ನಂತರ ಸಾವಿನ ಸಂಖ್ಯೆ ಏರಿಕೆಯಾಗಿದೆ. ಬುಧವಾರ ಮುಂಜಾನೆ 2 ಗಂಟೆಗೆ ಹೆದ್ದಾರಿಯ 17.9 ಮೀಟರ್ ಉದ್ದದ ಭಾಗವನ್ನು ಕುಸಿದು 23 ವಾಹನಗಳು ಉರುಳಿವೆ ಎಂದು ಮೀಝೌ ನಗರ ಸರ್ಕಾರ ತಿಳಿಸಿದೆ.
ಕನಿಷ್ಠ 30 ಜನರಿಗೆ ಗಾಯಗಳಾಗಿವೆ, ಗುವಾಂಗ್‌ಡಾಂಗ್ ಪ್ರಾಂತ್ಯದ ಕೆಲವು ಭಾಗಗಳಲ್ಲಿ ಕಳೆದ ಎರಡು ವಾರಗಳಲ್ಲಿ ದಾಖಲೆಯ ಮಳೆ ಮತ್ತು ಪ್ರವಾಹ ಉಂಟಾಗಿದೆ.