ಹಸಿ ಮೆಣಸಿನ ಕಾಯಿ 20, ಬೆಳ್ಳುಳ್ಳಿ 2, ಜೀರಿಗೆ 2 ಚಮಚ, ಹುಣಸೆ ಹಣ್ಣು 50 ಗ್ರಾಂ, ಕರಿಬೇವಿನ ಸೊಪ್ಪು 1/4 ಕಪ್, ಕೊತ್ತಂಬರಿ ಸೊಪ್ಪು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು ಹಾಗೂ ಅಡುಗೆ ಎಣ್ಣೆ.
ಮಾಡುವ ವಿಧಾನ :
ತೊಳೆದ ಹಸಿ ಮೆಣಸಿನಕಾಯಿಯನ್ನ ಬಟ್ಟೆಯಲ್ಲಿ ಒರೆಸಿ ಬಳಿಕ ಚಾಕುವಿನಿಂದ ಸ್ವಲ್ಪ ಕೊಯ್ದುಕೊಳ್ಳಿ (ಮಧ್ಯದಲ್ಲಿ ಸೀಳಿದ್ರೆ ಸಾಕು). ಒಂದು ಪಾತ್ರೆಯಲ್ಲಿ ಎರಡು ದೊಡ್ಡ ಚಮಚ ಎಣ್ಣೆಯನ್ನ ಹಾಕಿ. ಈ ಎಣ್ಣೆ ಬಿಸಿಯಾಗುತ್ತಿದ್ದಂತೆಯೇ ಹಸಿ ಮೆಣಸಿನ ಕಾಯಿಯನ್ನ ಹಾಕಿ ಹುರಿದುಕೊಳ್ಳಿ. ಇದರಿಂದ ಕಾರದ ಅಂಶ ಸ್ವಲ್ಪ ಕಡಿಮೆಯಾಗಲಿದೆ. ಇದೀಗ ಜೀರಿಗೆ ಹಾಗೂ ಬೆಳ್ಳುಳ್ಳಿಯನ್ನ ಪಾತ್ರೆಗೆ ಹಾಕಿ. ಇವಿಷ್ಟು ಚೆನ್ನಾಗಿ ಹುರಿದು ಆದ ಬಳಿಕ ಇದಕ್ಕೆ ಹುಣಸೆ ಹಣ್ಣು, ಕೊತ್ತಂಬರಿ ಸೊಪ್ಪು ಹಾಗೂ ಕರಿಬೇವಿನಸೊಪ್ಪನ್ನ ಹಾಕಿಕೊಳ್ಳಿ. ನಿಮಗೆ ಬೇಕು ಅಂದರೆ ಸ್ವಲ್ಪ ಬೆಲ್ಲವನ್ನೂ ಹಾಕಬಹುದು. ಈ ಮಿಶ್ರಣ ತಣ್ಣಗಾದ ಮೇಲೆ ಇದಕ್ಕೆ ಉಪ್ಪನ್ನ ಹಾಕಿ ಈ ಎಲ್ಲ ಮಿಶ್ರಣವನ್ನ ಮಿಕ್ಸಿ ಜಾರಿನಲ್ಲಿ ಗ್ರೈಂಡ್ ಮಾಡಿ. ಈ ಖಾರದ ಚಟ್ನಿ ರೊಟ್ಟಿ ಹಾಗೂ ಚಪಾತಿಗೆ ಸಖತ್ ಆಗಿರುತ್ತೆ . ಇದನ್ನ ಫ್ರಿಜ್ನಲ್ಲಿ ನೀವು ಹಲವು ದಿನಗಳವರೆಗೆ ಶೇಖರಿಸಿ ಇಡಬಹುದಾಗಿದೆ.