ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮಲ್ಲೇನಹಳ್ಳಿ ‘ಕೇವಲ’ ಆಶ್ರಮದಲ್ಲಿ ಅಮೆರಿಕ ಪೌರತ್ವ ಪಡೆದಿರುವ ಮಹಿಳಾ ವೈದ್ಯೆ ಮೇಲೆ ಅತ್ಯಾಚಾರ ಎಸಗಿದ ಯೋಗ ಗುರು ಪ್ರದೀಪ್ ನನ್ನು ಬಂಧಿಸಲಾಗಿದೆ.
ಮೂರು ತಿಂಗಳ ಹಿಂದೆ ಯೋಗ ಧ್ಯಾನ ಕಲಿಯಲು ಬಂದಿದ್ದ ಪಂಜಾಬ್ ಮೂಲದ ವೈದ್ಯೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೋಲಿಸರು ಯೋಗ ಗುರು ಪ್ರದೀಪ್ ನನ್ನು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯೋಗ ಕಲಿಯುವುದರ ಬಗ್ಗೆ ತಿಳಿದುಕೊಂಡು ಮೂರು ತಿಂಗಳ ಹಿಂದೆ ವೈದ್ಯೆ ಬಂದಿದ್ದರು. ವಿದೇಶಿಯರಿಗೂ ಯೋಗ, ಧ್ಯಾನ ಕಲಿಸುತ್ತಿದ್ದ ಪ್ರದೀಪ್ ಆಶ್ರಮದಲ್ಲಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪಿಸಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರದೀಪ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.