SHOCKING: ಹುಡುಗರೊಂದಿಗೆ ಮೊಬೈಲ್ ನಲ್ಲಿ ಮಾತಾಡಬೇಡ ಎಂದು ಗದರಿದ ಅಣ್ಣನನ್ನೇ ಕೊಡಲಿಯಿಂದ ಕೊಚ್ಚಿದ ತಂಗಿ

ಹುಡುಗರೊಂದಿಗೆ ಮಾತನಾಡಿದರೆ ಮೊಬೈಲ್ ಕಸಿದುಕೊಳ್ಳುತ್ತೇನೆ ಎಂದು ಅಣ್ಣ ಗದರಿದ್ದರಿಂದ 14 ವರ್ಷದ ಬಾಲಕಿಯೊಬ್ಬಳು ತನ್ನ ಅಣ್ಣನನ್ನು ಕೊಡಲಿಯಿಂದ ಹೊಡೆದು ಕೊಂದಿರುವ ಘಟನೆ ಛತ್ತೀಸ್‌ಗಢದ ಖೈರಗಢ-ಚುಯಿಖಾದನ್-ಗಂಡೈ (ಕೆಸಿಜಿ) ಜಿಲ್ಲೆಯಲ್ಲಿ ನಡೆದಿದೆ.

ಬಾಲಕಿ ಮೊಬೈಲ್ ಫೋನ್‌ನಲ್ಲಿ ಹುಡುಗರೊಂದಿಗೆ ಮಾತನಾಡಿದ್ದಕ್ಕಾಗಿ 18 ವರ್ಷದ ಸಹೋದರ ಗದರಿಸಿದ್ದಾನೆ. ಇನ್ನು ಮುಂದೆ ಮೊಬೈಲ್ ಬಳಸದಂತೆ ಎಚ್ಚರಿಸಿದ್ದಾನೆ. ಇದರಿಂದ ಕೋಪಗೊಂಡ 14 ವರ್ಷದ ಸೋದರಿ ಕೊಲೆ ಮಾಡಿದ್ದಾಳೆ. ಕೋಪದ ಭರದಲ್ಲಿ ಸಹೋದರ ಮಲಗಿದ್ದಾಗ ಕೊಡಲಿಯಿಂದ ಅವನ ಕತ್ತು ಕೊಯ್ದು ಸ್ಥಳದಲ್ಲೇ ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಬಟ್ಟೆಯ ಮೇಲಿನ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಲು ಸ್ನಾನ ಮಾಡಿದ ನಂತರ ಆಕೆ ತನ್ನ ಸಹೋದರನನ್ನು ಕೊಲೆ ಮಾಡಲಾಗಿದೆ ಎಂದು ನೆರೆಹೊರೆಯವರಿಗೆ ತಿಳಿಸಿದ್ದಾಳೆ. ಮನೆಯಲ್ಲಿ ಹೊಡೆದಾಟ ಅಥವಾ ದರೋಡೆಯ ಯಾವುದೇ ಸುಳಿವು ಕಂಡು ಬಂದಿಲ್ಲ. ಅನುಮಾನದ ಮೇಲೆ ಪೊಲೀಸರು ಬಾಲಕಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ಬಗ್ಗೆ ತಿಳಿಸಿದ್ದಾಳೆ.

ಶುಯಿಖಾಡನ್ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಲಿದಿಹ್ಕಲಾ ಗ್ರಾಮದಲ್ಲಿ ಶುಕ್ರವಾರ ನಡೆದ ಅಪರಾಧಕ್ಕಾಗಿ 14 ವರ್ಷದ ಬಾಲಕಿಯನ್ನು ಬಂಧಿಸಲಾಗಿದೆ. ಕುಟುಂಬದ ಇತರ ಸದಸ್ಯರು ಕೆಲಸಕ್ಕಾಗಿ ಹೊರಗೆ ಹೋಗಿದ್ದರು. ಮನೆಯಲ್ಲಿ ಒಬ್ಬನೇ ಇದ್ದಾಗ ಅಣ್ಣನನ್ನು ಕೊಂದಿರುವುದಾಗಿ ಹುಡುಗಿ ಪೊಲೀಸರಿಗೆ ತಿಳಿಸಿದ್ದಾಳೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read