
ಹಾಸನ: ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಕ್ರೆಡಿಟ್ ವಾರ್ ಆರಂಭವಾಗಿದೆ. ಚಂದ್ರಯಾನ ಕ್ರೆಡಿಟ್ ವಾರ್ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಚಂದ್ರಯಾನ ಯಶಸ್ಸಿನ ಕ್ರೆಡಿಟ್ ಒಂದು ರೀತಿ ಗೆಲುವಿಗೆ ಹಲವು ಅಪ್ಪಂದಿರು, ಸೋಲಿಗೆ ಒಬ್ಬನೇ ತಂದೆ ಎಂಬಂತಾಗಿದೆ ಎಂದಿದ್ದಾರೆ.
ಹಾಸನದಲ್ಲಿ ಮಾತನಾಡಿದ ಗೃಹ ಸಚಿವರು, ಎಲ್ಲರೂ ನಮ್ಮ ಪ್ರಯತ್ನ… ಚಂದ್ರಯಾನ ಯಶಸ್ವಿಯಾಗಿದೆ ಎನ್ನುತ್ತಾರೆ. ಆದರೆ ಹಗಲಿರುಳು ಶ್ರಮಿಸಿದ್ದು ಮಾತ್ರ ಇಸ್ರೋ ವಿಜ್ಞಾನಿಗಳು ಎಂದು ಹೇಳಿದ್ದಾರೆ.
ಇಸ್ರೋ ವಿಜ್ಞಾನಿಗಳ ಪರಿಶ್ರಮದ ಫಲವಾಗಿ ಚಂದ್ರಯಾನ ಯಶಸ್ವಿಯಾಗಿದೆ. ಅವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಬೇಕು. ಪ್ರಧಾನಿ, ಮುಖ್ಯಮಂತ್ರಿ, ನಾವೆಲ್ಲರೂ ಕ್ರೆಡಿಟ್ ತೆಗೆದುಕೊಳ್ಳಬಹುದು. ಆದರೆ ಇದು ಇಡೀ ದೇಶದ ಕ್ರೆಡಿಟ್ ಎಂದು ತಿಳಿಸಿದ್ದಾರೆ.