ಬೆಂಗಳೂರು: ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದ ಮೇಲೆ ದಲಿತರನ್ನು ತುಳಿದಿದ್ದಾರೆ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದನ್ನು ಸ್ವತಃ ಕಾಂಗ್ರೆಸ್ ನಾಯಕಿ ಮೊಟ್ಟಮ್ಮನವರೇ ಹೇಳಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದ ಮೇಲೆ ಕಡೆಗಣಿಸಲ್ಪಟ್ಟೆ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಮೋದಿಗೆ ನನ್ನನ್ನು ಕಂಡ್ರೆ ಭಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬೆಟ್ಟದ ಮೇಲೆ ಹುಲಿಯೊಂದು ಹೋಗುತ್ತಿತ್ತು. ಕುನ್ನಿ ಕೆಳಗೆ ಕೂತಿತ್ತು. ಬೆಟ್ಟದ ಮೇಲೆ ಹೋಗುತ್ತಿರುವ ಹುಲಿ ಈ ಕುನ್ನಿ ಕಡೆ ನೋಡಲಿಲ್ಲ. ಹಾಗಾಗಿ, ಕುನ್ನಿ ನನ್ನ ನೋಡಿ ಹುಲಿ ಹೆದರಿಕೊಂಡಿತು ಎಂದು ಹೇಳಿತು. ರಾಜ್ಯದಲ್ಲಿ ಸಿದ್ದರಾಮಯ್ಯ ನೋಡಿ ಒಂದು ಮಗು ಕೂಡ ಹೆದರುವುದಿಲ್ಲ. ಇನ್ನೂ ಪ್ರಧಾನಿ ನರೇಂದ್ರ ಮೋದಿಯವರು ಭಯ ಬೀಳುತ್ತಾರಾ ಎಂದು ಸಿದ್ದರಾಮಯ್ಯನವರಿಗೆ ಟಾಂಗ್ ಕೊಟ್ಟಿದ್ದಾರೆ.