ನವದೆಹಲಿ: ಕಚೇರಿಗೆ ತಡವಾಗಿ ಬಂದು ಬೇಗನೆ ವಾಪಸ್ ಹೋಗುವುದನ್ನೇ ರೂಢಿಸಿಕೊಂಡಿರುವ ನೌಕರರನ್ನು ಗಂಭೀರವಾಗಿ ಪರಿಗಣಿಸುವಂತೆ ಎಲ್ಲಾ ಪ್ರಾಧಿಕಾರಗಳಿಗೆ ಕೇಂದ್ರ ಸರ್ಕಾರದಿಂದ ಸೂಚನೆ ನೀಡಲಾಗಿದೆ. ಈ ರೀತಿ ತಡವಾಗಿ ಬಂದು ಬೇಗನೆ ಹೋಗುವ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಅನೇಕ ನೌಕರರು ಆಧಾರ್ ಎನೇಬಲ್ಡ್ ಬಯೋಮೆಟ್ರಿಕ್ ಅಟೆಂಡೆನ್ಸ್ ಸಿಸ್ಟಂ(AEBAS) ಹಾಜರಾತಿ ನೋಂದಾಯಿಸುತ್ತಿಲ್ಲ. ಅಲ್ಲದೆ, ಅನೇಕರು ತಡವಾಗಿ ಕಚೇರಿಗೆ ಬಂದು ಬಹು ಬೇಗನೆ ಹೋಗುವುದನ್ನೇ ರೂಢಿಸಿಕೊಂಡಿದ್ದಾರೆ. ಇಂತಹ ಪ್ರಕರಣಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ.
ಮೊಬೈಲ್ ಫೋನ್ ಆಧಾರಿತ ಫೇಸ್ ಅಥೆಂಟಿಫಿಕೇಶನ್ ಸಿಸ್ಟಮ್ ಅಳವಡಿಸಿಕೊಳ್ಳುವಂತೆ ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ. ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಿಗೂ ಈ ಆದೇಶ ಅನ್ವಯವಾಗಲಿದೆ. ಕಚೇರಿಗೆ ತಡವಾಗಿ ಬಂದು ಬೇಗನೆ ವಾಪಸ್ ಹೋಗುವುದನ್ನು ಅಭ್ಯಾಸ ಮಾಡಿಕೊಂಡ ನೌಕರರನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಲಾಗಿದೆ.