6.40 ಲಕ್ಷ ಗ್ರಾಮಗಳಲ್ಲಿ ಭಾರತ್ ನೆಟ್ ವಿಸ್ತರಣೆಗೆ ಕೇಂದ್ರದಿಂದ 1,39,500 ಕೋಟಿ ರೂ.

ನವದೆಹಲಿ: ದೇಶಾದ್ಯಂತ 6.40 ಗ್ರಾಮಗಳಲ್ಲಿ ಭಾರತ್ ನೆಟ್ ವಿಸ್ತರಿಸಲು ಸರ್ಕಾರ 1,39,579 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ.

ಭಾರತ್ ನೆಟ್‌ನ ವಿಸ್ತರಣೆ ಯೋಜನೆಯನ್ನು ಸುಮಾರು ಎರಡು ವರ್ಷಗಳಲ್ಲಿ ಸಾಧಿಸಲಾಗುವುದು ಎಂದು ಸಂವಹನ ಸಚಿವಾಲಯ ತಿಳಿಸಿದೆ. ಎಂಟು ತಿಂಗಳಲ್ಲಿ ದೇಶಾದ್ಯಂತ 60 ಸಾವಿರ ಗ್ರಾಮ ಪಂಚಾಯಿತಿ ಗ್ರಾಮಗಳಲ್ಲಿ ಪ್ರಾಯೋಗಿಕ ಯೋಜನೆ ಯಶಸ್ವಿಯಾದ ನಂತರ ವಿಸ್ತರಣೆ ಯೋಜನೆಗೆ ನಿರ್ಧರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಾಯೋಗಿಕ ಯೋಜನೆಯಲ್ಲಿ ಭಾರತ್ ನೆಟ್ 1.94 ಲಕ್ಷ ಹಳ್ಳಿಗಳನ್ನು ತಲುಪಿದೆ. 5 ಲಕ್ಷ 67 ಸಾವಿರ ಕುಟುಂಬಗಳು ಇಲ್ಲಿಯವರೆಗೆ ಸಕ್ರಿಯ ಭಾರತ್ ನೆಟ್ ಸಂಪರ್ಕಗಳನ್ನು ಹೊಂದಿವೆ. ವಿಸ್ತರಣೆ ಕಾರ್ಯಕ್ರಮವು ಸುಮಾರು ಎರಡು ಲಕ್ಷ 50 ಸಾವಿರ ಉದ್ಯೋಗಗಳನ್ನು ಒದಗಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ನಿರ್ಮಿಸಲಾದ ಭಾರತ್ ನೆಟ್ ವಿಶ್ವದ ಅತಿದೊಡ್ಡ ಗ್ರಾಮೀಣ ಬ್ರಾಡ್‌ಬ್ಯಾಂಡ್ ಸಂಪರ್ಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ, ಇದನ್ನು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಸೇರಿದಂತೆ ಕೇಂದ್ರ ಪಿಎಸ್‌ಯುಗಳು ಜಾರಿಗೆ ತರುತ್ತಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read