Caught on Cam | ಗ್ರಾಹಕರ ಮೇಲೆ ಗುಂಡು ಹಾರಿಸಿದ ರೆಸ್ಟೋರೆಂಟ್ ಸಿಬ್ಬಂದಿ

ಊಟದ ಮೆನುವಿನಲ್ಲಿ ಒಂದು ಐಟಂ ಮಿಸ್ ಆಗಿದ್ದನ್ನು ಪ್ರಶ್ನಿಸಿದ ಗ್ರಾಹಕ ಕುಟುಂಬದ ಮೇಲೆಯೆ ರೆಸ್ಟೋರೆಂಟ್ ಸಿಬ್ಬಂದಿ ಗುಂಡು ಹಾರಿಸಿದ ಘಟನೆ ಅಮೇರಿಕಾದಲ್ಲಿ ನಡೆದಿದೆ.

2021 ರಲ್ಲಿ ‘ಜಾಕ್ ಇನ್ ದಿ ಬಾಕ್ಸ್’ ಹೆಸರಿನ ಫಾಸ್ಟ್ ಫುಡ್ ರೆಸ್ಟೋರೆಂಟ್‌ನ ಹೂಸ್ಟನ್ ಔಟ್‌ಲೆಟ್‌ನಲ್ಲಿ ಈ ಘಟನೆ ಸಂಭವಿಸಿದೆ. ಈ ಘಟನೆ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು ಇದರ ವಿಡಿಯೋ ತುಣುಕನ್ನು ಮಂಗಳವಾರ ಸಂತ್ರಸ್ಥ ಕುಟುಂಬದ ವಕೀಲರು ಬಿಡುಗಡೆ ಮಾಡಿದ್ದಾರೆ ಎಂದು ವಿದೇಶಿ ಮಾಧ್ಯಮ ವರದಿ ಮಾಡಿದೆ. ಈ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, 7 ಮಿಲಿಯನ್ ಗೂ ಹೆಚ್ಚು ವ್ಯೂವ್ಸ್ ಆಗಿದೆ.

ಅಂಥೋನಿ ಎಂಬವರು ರೆಸ್ಟೋರೆಂಟ್‌ನಲ್ಲಿ ಎರಡು ಕಾಂಬೊ ಊಟಗಳನ್ನು ಆರ್ಡರ್ ಮಾಡಿದ್ದರು. ಆದರೆ ಈ ಊಟದಲ್ಲಿ ಕರ್ಲಿ ಫ್ರೈಸ್ ಇರಲಿಲ್ಲ. ಈ ಬಗ್ಗೆ ರೆಸ್ಟೋರೆಂಟ್ ಸಿಬ್ಬಂದಿ ಅಲೋನಿಯಾ ಎಂಬವರ ಗಮನಕ್ಕೆ ತಂದಿದ್ದು ಬಳಿಕ ಇಬ್ಬರ ನಡುವೆ ವಾದಕ್ಕೆ ಕಾರಣವಾಗಿದೆ. ಸಿಸಿ ಕ್ಯಾಮಾರದ ಫೂಟೇಜ್‌ನಲ್ಲಿ ಈ ವಾದ-ವಿವಾದ ವಿಕೋಪಕ್ಕೆ ತಿರುಗಿರುವುದು ಕಂಡು ಬಂದಿದೆ.

ಫಾಸ್ಟ್ ಫುಡ್ ಉದ್ಯೋಗಿ ಅಂಥೋನಿ ಸೇರಿದಂತೆ ಅವರ ಮೂವರು ಕುಟುಂಬ ಸದಸ್ಯರು ಇದ್ದ ಕಾರಿನ ಮೇಲೆ ಗುಂಡು ಹಾರಿಸಿದ್ದಾನೆ. ಅಂಥೋನಿ ರಾಮೋಸ್, ಅವರ ಗರ್ಭಿಣಿ ಪತ್ನಿ ಮತ್ತು ಅವರ 6 ವರ್ಷದ ಮಗಳು ಈ ಕಾರಿನಲ್ಲಿದ್ದರು. ಅಲೋನಿಯಾ ಫೋರ್ಡ್ ಹೆಸರಿನ ಈ ಉದ್ಯೋಗಿ ಅಂಥೋನಿ ಅವರ ಕಾರಿನ ಮೇಲೆ ಗುಂಡು ಹಾರಿಸುವ ಮೊದಲು ಕೆಚಪ್ ಪ್ಯಾಕೆಟ್‌ಗಳು ಮತ್ತು ಇತರ ವಸ್ತುಗಳನ್ನು ಕಾರಿನತ್ತ ಎಸೆದಿರುವುದು ಕಂಡು ಬಂದಿದೆ.

ಗುಂಡು ಹಾರಿಸುತ್ತಿದ್ದಂತೆ ಅಂಥೋನಿ ತನ್ನ ಕಾರನ್ನು ವೇಗವಾಗಿ ಕೊಂಡೊಯ್ಯುತ್ತಾರೆ. ಈ ಸಂದರ್ಭ ರೆಸ್ಟೋರೆಂಟ್‌ನಲ್ಲಿದ್ದ ಇನ್ನೊಬ್ಬ ಉದ್ಯೋಗಿ ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಾರೆ. ಅಂಥೋನಿ ಅವರು ಸುರಕ್ಷಿತ ಸ್ಥಳಕ್ಕೆ ರೀಚ್ ಆದ ಬಳಿಕ ಪೋಲಿಸರನ್ನು ಸಂಪರ್ಕಿಸಿದ ನಂತರ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. 2022 ರಲ್ಲಿ ಫಾಸ್ಟ್-ಫುಡ್ ರೆಸ್ಟೋರೆಂಟ್ ಮತ್ತು ಅಲ್ಲಿನ ಸಿಬ್ಬಂದಿ ಅಲೋನಿಯಾ ಫೋರ್ಡ್ ವಿರುದ್ಧ ವಕೀಲ ರಾಂಡಾಲ್ ಎಲ್ ಕ್ಯಾಲಿನೆನ್ ಎಂಬವರು ಮೊಕದ್ದಮೆ ಹೂಡಿದ್ದಾರೆ ಎಂದು ಜನರು ಹೂಸ್ಟನ್ ಮೂಲದ ದೂರದರ್ಶನ ಕೇಂದ್ರ ಕೆಟಿಆರ್‌ಕೆ ವರದಿ ಮಾಡಿದೆ. ಈ ಘಟನೆಯ ತುಣುಕನ್ನು ವಕೀಲ ಕ್ಯಾಲಿನೆನ್ ಸೆಪ್ಟೆಂಬರ್ 26 ರಂದು ಬಿಡುಗಡೆ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read