ಮಧ್ಯಪ್ರದೇಶದ ಜಬಲ್‌ಪುರದ ಐಷಾರಾಮಿ ವಸತಿ ಕಾಲೋನಿಯಲ್ಲಿ ಕುಡಿದ ವ್ಯಕ್ತಿಯೊಬ್ಬ ಹಾಡಹಗಲೇ ಅವಾಂತರ ಸೃಷ್ಟಿಸಿದ್ದಾನೆ. ನಿಲ್ಲಿಸಿದ್ದ ಎಸ್‌ಯುವಿಗಳನ್ನು ಧ್ವಂಸಗೊಳಿಸಿದ್ದು, ತಡೆಯಲೆತ್ನಿಸಿದ ಸಾರ್ವಜನಿಕರ ಮೇಲೂ ಕಲ್ಲು ತೂರಾಟ ಮಾಡಿದ್ದಾನೆ.
ಈ ಸಂಪೂರ್ಣ ಘಟನೆ ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ರೆಕಾರ್ಡ್ ಆಗಿರುವ ಸಿಸಿ ಟಿವಿ ದೃಶ್ಯಗಳಲ್ಲಿ, ವ್ಯಕ್ತಿ, ಮನೆಗಳ ಹೊರಗೆ ನಿಲ್ಲಿಸಿದ ಕಾರುಗಳಿಗೆ ಕಲ್ಲು ಎಸೆಯುವುದನ್ನು ಕಾಣಬಹುದು. ನಂತರ ಪೊಲೀಸರು ಆತನನ್ನು ತಡೆದು ಬಂಧಿಸಲು ಬಂದಾಗ ಅವರ ಮೇಲೂ ಕಲ್ಲು ತೂರಿದ್ದಾನೆ.
ಆರಂಭದಲ್ಲಿ ಶಬ್ದ ಕೇಳಿ ಮಹಿಳೆಯರು ಸೇರಿದಂತೆ ನಿವಾಸಿಗಳು ಮನೆಯಿಂದ ಹೊರಗೆ ಬಂದಿದ್ದು, ಆ ವ್ಯಕ್ತಿ ಸಾರ್ವಜನಿಕರ ಮೇಲೆ ಕಲ್ಲು ತೂರಾಟ ಆರಂಭಿಸಿದಾಗ ಘಟನೆಯಿಂದ ಬೆಚ್ಚಿಬಿದ್ದ ಅವರು ತಕ್ಷಣ ಒಳ ಓಡಿದ್ದಾರೆ. ಕೆಲವರು ಅವನನ್ನು ಹಿಡಿಯಲು ಪ್ರಯತ್ನಿಸುತ್ತಿರುವಾಗ ಅವರ ಮೇಲೆ ಕಲ್ಲುಗಳನ್ನು ಎಸೆದಿದ್ದಾನೆ.
ಮಾಹಿತಿ ಪ್ರಕಾರ, ಮದನ್ ಮಹಲ್ ಪೊಲೀಸ್ ಠಾಣೆ ವ್ಯಾಪ್ತಿಯ ಅರುಣ್ ಡೈರಿ ಬಳಿ ಶನಿವಾರ ಈ ಘಟನೆ ನಡೆದಿದೆ. ಮನೆಯೊಂದರ ಹೊರಗೆ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಒಡೆದು ಆ ಪ್ರದೇಶದಲ್ಲಿದ್ದ ಹಲವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ. ಘಟನೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯು ಸ್ಥಳೀಯ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ.
#WATCH | MP: ‘Drunk’ Youth Creates Ruckus At Residential Colony In Jabalpur, Pelt Stones At Parked Cars#Jabalpur #MadhyaPradesh #MPNews pic.twitter.com/PDcUKaru7i
— Free Press Madhya Pradesh (@FreePressMP) November 18, 2024