ಬೆಂಗಳೂರು: ಕೆ ಎಸ್ ಡಿ ಎಲ್- ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಲ್ಲಿ ಮತ್ತೊಂದು ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. 20 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಸರ್ಕಾರದ ಡಾಕ್ಯುಮೆಂಟರಿಯಿಂದಲೇ ಬಹಿರಂಗವಾಗಿದೆ.
ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ತನ್ನ ಉತ್ಪನ್ನಗಳಿಗೆ ಕಚ್ಚಾ ವಸ್ತುಗಳನ್ನು ಖರೀದಿಸಲು 20 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿರುವುದು ಸರ್ಕಾರದ ಡಾಕ್ಯುಮೆಂಟರಿಯಿಂದಲೇ ಬಯಲಾಗಿದೆ.
ಕೆ ಎಸ್ ಡಿ ಎಲ್ ನಿರ್ದೇಶಕರಿಗೆ ಫೆ.28ರಂದು ಪತ್ರ ಬರೆದಿದ್ದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ 3 ವರ್ಷಗಳ ಹಿಂದೆ ಕಚ್ಚಾ ವಸ್ತುಗಳ ಖರೀದಿಯಲ್ಲಿ ನಡೆದಿದ್ದ 20 ಕೋಟಿ ರೂಪಾಯಿಗೂ ಹೆಚ್ಚಿನ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದರು. ಇದಾದ ಕೆಲ ದಿನಗಳಲ್ಲೇ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಪ್ರಶಾಂತ್ ಮಾಡಾಳ್ ಮನೆಯಲ್ಲಿ ಒಟ್ಟು 8.23 ಕೋಟಿ ರೂಪಾಯಿ ಹಣ ಮತ್ತು ಚಿನ್ನಾಭರಣ ಪತ್ತೆಯಾಗಿತ್ತು. ಒಟ್ಟಾರೆ ಪ್ರಶಾಂತ್ ಕೇಸ್ ಹಾಗೂ ಕೆ ಎಸ್ ಡಿ ಎಲ್ ಹಗರಣ ಯಾವ ಹಂತಕ್ಕೆ ಹೋಗಲಿದೆ ಕಾದು ನೋಡಬೇಕಿದೆ.