ಹೆದ್ದಾರಿ ಪಕ್ಕ ನಿಂತಿದ್ದ ಕಾರಿನಲ್ಲಿತ್ತು 1 ಕೋಟಿ ರೂ. ನಗದು: ಎಲ್ಲವೂ ನಿಗೂಢ…!

ಕಾರವಾರ: ಹೆದ್ದಾರಿ ಪಕ್ಕ ನಿಲ್ಲಿಸಿದ್ದ ಕಾರ್ ನಲ್ಲಿ ಒಂದು ಕೋಟಿ ರೂಪಾಯಿ ಪತ್ತೆಯಾಗಿದೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ರಾಮನಗುಳಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕ ನಿಲ್ಲಿಸಿದ್ದ ಕಾರ್ ನಲ್ಲಿ ಹಣ ಮತ್ತು ಮೂರು ನಕಲಿ ನಂಬರ್ ಪ್ಲೇಟ್ ಗಳು ಪತ್ತೆಯಾಗಿವೆ.

ಕೆಎ19 ಪಾಸಿಂಗ್ ನ ಮೂರು ನಂಬರ್ ಪ್ಲೇಟ್ ಗಳು ಪತ್ತೆಯಾಗಿದೆ. ಪತ್ತೆಯಾಗಿರುವ ಕಾರ್ ಮಂಗಳೂರು ಮೂಲದ್ದು ಎನ್ನುವ ಸಂಶಯವಿದೆ. ಕ್ರೆಟಾ ಕಾರ್ ಒಳಗೆ ಲಾಕರ್ ಸಿಸ್ಟಮ್ ಮಾಡಲಾಗಿದ್ದು, ಲಾಕರ್ ಇರುವುದರ ಬಗ್ಗೆ ಪೊಲೀಸರ ಗಮನಕ್ಕೆ ಬಂದಿರಲಿಲ್ಲ. ಕಾರ್ ಅನ್ನು ಠಾಣೆಗೆ ತಂದು ಪರಿಶೀಲಿಸಿದಾಗ ಲಾಕರ್ ಇರುವುದು ಗೊತ್ತಾಗಿದೆ ಕಂಡು ಬಂದಿದೆ. ಬ್ಯಾಗ್ ನಲ್ಲಿ 1,14,99,500 ರೂಪಾಯಿ ಪತ್ತೆಯಾಗಿದೆ. ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read