ಕ್ಯಾಪ್ಸಿಕಂನಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಅದು ಅಲ್ಲದೇ ಹೆಚ್ಚಿನ ಅಡುಗೆಗೆ ಇದನ್ನು ಬಳಸುತ್ತಾರೆ. ಮಾರುಕಟ್ಟೆಗೆ ಹೋಗಿ ತರುವುದಕ್ಕಿಂತ ಮನೆಯಲ್ಲಿಯೇ ಇದನ್ನು ಸುಲಭವಾಗಿ ಬೆಳೆಯುವ ವಿಧಾನ ಇಲ್ಲಿದೆ ನೋಡಿ.
ಮೊದಲು ಸರಿಯಾದ ಬೀಜಗಳನ್ನು ಆರಿಸಿ. ಬಳಿಕ ಪಾಟ್ ನಲ್ಲಿ ಮಣ್ಣನ್ನು ತುಂಬಿಸಿ ಅದನ್ನು ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಇಡಿ. ನಂತರ ಅದಕ್ಕೆ ಸಾವಯವ ಗೊಬ್ಬರ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬೀಜವನ್ನು ಹಾಕಿ ಅದರ ಮೇಲೆ ಮಣ್ಣನ್ನು ಹಾಕಿ ನೀರನ್ನು ಚಿಮುಕಿಸಿ.
ಬೀಜಗಳು ಮೊಳಕೆಯೊಡೆಯವ ತನಕ ಹೆಚ್ಚು ಬಿಸಿಲಿನಲ್ಲಿ ಇಡಬೇಡಿ. ಮೊಳಕೆ ಬಂದ ಬಳಿಕ ಅದರ ಪಕ್ಕದಲ್ಲಿ ಬೆಳೆದ ಕಳೆ ಹುಲ್ಲುಗಳನ್ನು ಆಗಾಗ ತೆಗೆಯುತ್ತಿರಿ. ಕೀಟನಾಶಕಗಳನ್ನು ಸಿಂಪಡಿಸಿ. ಹೀಗೆ ಮಾಡಿದರೆ 2-3 ತಿಂಗಳಿನಲ್ಲೇ ಕ್ಯಾಪ್ಸಿಕಂ ಬೆಳೆಯುತ್ತದೆ. ಮನೆಯ ಹಿತ್ತಲಿನಲ್ಲಿ, ಟೆರೇಸ್ ನಲ್ಲಿ ಸುಲಭವಾಗಿ ಇದನ್ನು ಬೆಳೆಯಬಹುದು.