ಬೆಂಗಳೂರು: ರಾಜ್ಯದಲ್ಲಿ ಮಳೆ ಇಲ್ಲದೆ ಬಹುತೇಕ ಕಡೆ ಬರ ಪರಿಸ್ಥಿತಿ ಇದ್ದು, ಸಮೀಕ್ಷೆ ನಡೆಸಿ 100ಕ್ಕೂ ಅಧಿಕ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗುವುದು. ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ಹೇಳಲಾಗಿತ್ತು.
ಆದರೆ, ಮಳೆ ಕೊರತೆ, ಬರ ಘೋಷಣೆ ಬಗ್ಗೆ ಗುರುವಾರ ನಡೆದ ಸಂಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನೈಜ ಸ್ಥಿತಿಯ ಇನ್ನೊಂದು ವರದಿ ಪಡೆದ ಬಳಿಕ ಮುಂದಿನ ವಾರ ತಾಲೂಕು ಘೋಷಣೆ ಮಾಡುವ ಬಗ್ಗೆ ಆದೇಶ ಹೊರಡಿಸಲು ಸರ್ಕಾರ ತೀರ್ಮಾನ ಕೈಗೊಂಡಿದೆ.
ಬರ ತಾಲೂಕು ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಕೇಂದ್ರದ ಮಾರ್ಗಸೂಚಿ ವಿರುದ್ಧ ಸಂಪುಟ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಕೇಂದ್ರದ ನಿಯಮಾವಳಿ ಪ್ರಕಾರ 62 ತಾಲೂಕುಗಳಲ್ಲಿ ಬರ ಇದ್ದರೂ ಘೋಷಣೆ ಮಾಡಿಲ್ಲ. ಈ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದಲ್ಲಿ ಉಳಿದ ತಾಲೂಕಿನ ಶಾಸಕರಿಂದ ಒತ್ತಡ ಬರುತ್ತದೆ. ಅಂದಾಜು, ಬರ ನಿರ್ವಹಣೆಗೆ ಹಣ ಹೊಂದಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಒಂದು ವಾರ ತೀರ್ಮಾನ ಕೈಗೊಳ್ಳುವುದನ್ನು ಮುಂದೂಡಲಾಗಿದೆ. ಸರ್ಕಾರ ಬರ ಪೀಡಿತ ಎಂದು ಘೋಷಿಸಿ ಪರಿಹಾರ ನೀಡಬಹುದೆಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕ್ ಆಗಿದೆ.