ಮತ್ತೆ ಮುನ್ನೆಲೆಗೆ ಬಂದ ಅಧಿಕಾರ ಹಂಚಿಕೆ ಸೂತ್ರ: ಸಂಪುಟ ಪುನಾರಚನೆ, ಹೊಸಬರಿಗೆ ಅವಕಾಶ ನಿರೀಕ್ಷೆ

ಬೆಂಗಳೂರು: ತೆರೆಮರೆಗೆ ಸರಿದಿದ್ದ ಅಧಿಕಾರ ಹಂಚಿಕೆ ಸೂತ್ರ ಮತ್ತೆ ಮುನ್ನೆಲೆಗೆ ಬಂದಿದೆ. 30 ತಿಂಗಳ ಬಳಿಕ ಸಂಪುಟ ಪುನಾರಚನೆಯಾಗಲಿದೆ. ಹೊಸಬರಿಗೆ ಅವಕಾಶ ಸಿಗಲಿದೆ ಎನ್ನುವ ನಿರೀಕ್ಷೆ ಆಕಾಂಕ್ಷಿಗಳಲ್ಲಿದೆ.

ವಿಧಾನಸಭೆಯಲ್ಲಿ ಕಾಂಗ್ರೆಸ್ ಮುಖ್ಯ ಸಚೇತಕ ಅಶೋಕ ಪಟ್ಟಣ ಈ ಬಗ್ಗೆ ಮಾತನಾಡಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರೇ ಎರಡೂವರೆ ವರ್ಷಗಳ ಬಳಿಕ ಸಂಪುಟ ಬದಲಾವಣೆಯ ಭರವಸೆ ನೀಡಿದ್ದಾರೆ. ಆದರೆ, ಇಡೀ ಸಂಪುಟವೇ ಪುನಾರಚನೆ ಆಗಲಿದೆಯೇ ಅಥವಾ ಭಾಗಶಃ ಪುನಾರಚನೆ ಮಾಡುತ್ತಾರೆಯೇ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಜೂನಿಯರ್, ಸೀನಿಯರ್ ಎಂಬುದಿಲ್ಲ. ಪಕ್ಷಕ್ಕೆ ಸೇರಿದ ಮೇಲೆ ಎಲ್ಲರೂ ಒಂದೇ. ಅದೃಷ್ಟ ಇದ್ದವರು ಸಚಿವರಾಗುತ್ತಾರೆ. ನಮ್ಮಂತ ದುರಾದೃಷ್ಟವಂತರು ಹೀಗೆ ಮಾತನಾಡುತ್ತೇವೆ ಎಂದು ಅಶೋಕ ಪಟ್ಟಣ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರ ರಚನೆಯ ಆರಂಭದ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಒಪ್ಪಂದ ನಡೆದಿದೆ ಎನ್ನುವ ವದಂತಿ ಹರಡಿತ್ತು. ನಂತರ ಹೈಕಮಾಂಡ್ ಮಧ್ಯ ಪ್ರವೇಶದಿಂದ ಅಧಿಕಾರ ಹಂಚಿಕೆ ವದಂತಿಗೆ ಬ್ರೇಕ್ ಬಿದ್ದಿತ್ತು. ರಾಮದುರ್ಗ ಶಾಸಕ ಹಾಗೂ ಸರ್ಕಾರಿ ಮುಖ್ಯ ಸಚೇತಕ ಪಿ.ಎಂ. ಅಶೋಕ್ ಪಟ್ಟಣ ಅವರು ಎರಡೂವರೆ ವರ್ಷದ ನಂತರ ಸಂಪುಟ ಬದಲಾವಣೆಯಾಗಲಿದೆ ಎಂದು ಹೇಳುವ ಮೂಲಕ ತೆರೆಮರೆಗೆ ಸರಿದಿದ್ದ ಅಧಿಕಾರ ಹಂಚಿಕೆ ಸೂತ್ರ ಮತ್ತೆ ಮುನ್ನೆಲೆಗೆ ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read