ಚಿಕ್ಕಮಗಳೂರು: ಸಿ.ಟಿ.ರವಿ ಭದ್ರತೆಗಾಗಿ ಬೇರೆ ಬೇರೆ ಕಡೆ ಅವರನ್ನು ಕರೆದೊಯ್ಯಲಾಯಿತು ಎಂಬ ಬೆಳಗಾವಿ ಕಮಿಷನರ್ ಯಡಾ ಮಾರ್ಟಿನ್ ಹೇಳಿಕೆಗೆ ಕಿಡಿಕಾರಿರುವ ಸಿ.ಟಿ.ರವಿ, ಸುವರ್ಣಸೌಧ, ಪೊಲೀಸ್ ಠಾಣೆಯಲ್ಲಿ ಭದ್ರತೆ ಕೊಡಲಾಗದೇ ಬೀದಿಯಲ್ಲಿ ಭದ್ರತೆ ಸಿಗುತ್ತದೆಂದು ಭಾವಿಸುವುದು ಮೂರ್ಖತನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಬೆಳಗಾವಿ ಪೊಲೀಸ್ ಕಮಿಷನರ್ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದ್ದಾರೆ. ರಾತ್ರಿಯಿಡಿ ಸುತ್ತಾಡಿಸಿದ್ದಾರೆ. ಭದ್ರತೆಗಾಗಿ ಹೀಗೆ ಮಾಡಿದ್ದೇವೆ ಎಂಬುದು ಸುಳ್ಳು ಎಂದು ಗುಡುಗಿದರು.
ಸುಳ್ಲು ಹೇಳ್ತಾ ಹೇಳ್ತಾ ಸತ್ಯ ಮುಚ್ಚಿದಲು ಆಗಲ್ಲ. ಸುವರ್ಣ ಸೌಧದಲ್ಲಿ, ಪೊಲೀಸ್ ಠಾಣೆಯಲ್ಲಿ ಶಾಸಕನಿಗೆ ಭದ್ರತೆ ಕೊಡಲಾಗದಿದ್ದರೆ ಬೀದಿಯಲ್ಲಿ ಭದ್ರತೆ ಸಿಗುತ್ತದೆಂದು ಭಾವಿಸುವುದೇ ಮೂರ್ಖತನ. ಖಾನಾಪುರದಲ್ಲಿ ಬಿಜೆಪಿಯ ಸಾವಿರಾರು ಬೆಂಬಲಿಗರು ಸೇರಿದ್ದರು. ಬೆಳಗಾವಿ ಜಿಲ್ಲೆಯ ಖಾನಾಪುರ ಹಿಂದುತ್ವದ ಭದ್ರ ಕೋಟೆ. ಐಸೋಲೇಟ್ ಯಾಕೆ ಮಾಡಿದ್ರೀ ಅಂತಾ ಕಮಿಷನರ್ ಹೇಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಂದು ಕೇವವ ಆರು ಪೊಲೀಸರು ಮಾತ್ರ ಇದ್ದಾರೆ. ದಾರಿ ಮಧ್ಯೆ ಅಟ್ಯಾಕ್ ಆಗಿದ್ದರೆ ಆರು ಪೊಲೀಸರು ಏನು ಮಾಡಲು ಸಾಧ್ಯ? ಭದ್ರತೆಗಾಗಿ ಕರೆದೊಯ್ದಿದ್ದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.