ಲೋಕಸಭಾ ಚುನಾವಣೆ ಪೂರ್ಣಗೊಂಡ ಬೆನ್ನಲ್ಲೇ 7 ರಾಜ್ಯಗಳ ಒಟ್ಟು 13 ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ, ಉಪ ಚುನಾವಣಾ ದಿನಾಂಕವನ್ನು ಘೋಷಿಸಿದೆ. ಜುಲೈ 10 ರಂದು ಮತದಾನ ನಡೆಯಲಿದ್ದು ಜುಲೈ 13ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.
ಚುನಾವಣಾ ಆಯೋಗದಿಂದ ಇಂದು ಈ ಕುರಿತಂತೆ ಘೋಷಣೆ ಹೊರ ಬಿದ್ದಿದ್ದು, ಬಿಹಾರದ ರೂಪಾಲಿ, ಪಶ್ಚಿಮ ಬಂಗಾಳದ ರಾಯಗಂಜ್, ರಾಣಾ ಘಾಟ್ ದಕ್ಷಿಣ, ಬಗ್ಡಾ ಮತ್ತು ಮಣಿಕ್ಟಾಲ, ತಮಿಳುನಾಡಿನ ವಿಕ್ರವಂಡಿ, ಮಧ್ಯಪ್ರದೇಶದ ಅಮರ್ವಾರ, ಉತ್ತರಾಖಂಡ್ ನ ಬದರಿನಾಥ್ ಮತ್ತು ಮಂಗ್ಳೂರು, ಪಂಜಾಬಿನ ಜಲಂಧರ್ ಹಾಗೂ ಹಿಮಾಚಲ ಪ್ರದೇಶದ ದೆಹರಾ, ಅಮೀರ್ಪುರ್ ಮತ್ತು ನಲಗರ್ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.
ಜೂನ್ 14ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಜೂನ್ 21 ನಾಮಪತ್ರ ಸಲ್ಲಿಸಲು ಅಂತಿಮ ದಿನವಾಗಿದೆ. ಜೂನ್ 24ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಜೂನ್ 26 ಕೊನೆಯ ದಿನಾಂಕವಾಗಿದೆ. ಜುಲೈ ಹತ್ತರಂದು ಮತದಾನ ಹಾಗೂ ಜುಲೈ 13ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.