BYD ಭಾರತದಲ್ಲಿ eMax 7 ಎಲೆಕ್ಟ್ರಿಕ್ MPV ಅನ್ನು ಬಿಡುಗಡೆ ಮಾಡಿದೆ. ಇದು ಎರಡು ರೂಪಾಂತರಗಳಲ್ಲಿ ಲಭ್ಯವಿದೆ – ಪ್ರೀಮಿಯಂ ಮತ್ತು ಸುಪೀರಿಯರ್. ಇದರ ಬೆಲೆ 26.90 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ. BYD eMax 7 ಅನ್ನು e6ಗೆ ಬದಲಾಗಿ ಪ್ರಾರಂಭಿಸಲಾಗಿದೆ. eMAX 7 ಅತ್ಯಂತ ಆಕರ್ಷಕವಾದ LED ಹೆಡ್ ಲ್ಯಾಂಪ್‌ಗಳನ್ನು ಹೊಂದಿದ್ದು, ಮುಂಭಾಗದ ಬಂಪರ್ ಅನ್ನು ಕೂಡ ಮರುವಿನ್ಯಾಸ ಮಾಡಲಾಗಿದೆ. ಹಿಂಭಾಗದಲ್ಲಿರುವ ಸ್ಲಿಮ್ LED ಟೈಲ್‌ಲೈಟ್‌ಗಳು ಇದರ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿವೆ. ಎಲೆಕ್ಟ್ರಿಕ್ MPV 6-ಸೀಟ್ ಮತ್ತು 7- ಸೀಟ್‌ಗಳಲಿ ಲಭ್ಯವಿದೆ.
ಕಾರಿನ ಒಳವಿನ್ಯಾಸ e6 ಅನ್ನು ಹೋಲುತ್ತದೆ. ಇಮ್ಯಾಕ್ಸ್ 7 ದೊಡ್ಡ 12.8-ಇಂಚಿನ ಸೆಂಟ್ರಲ್ ಟಚ್‌ಸ್ಕ್ರೀನ್, 3-ಸ್ಪೋಕ್ ಸ್ಟೀರಿಂಗ್ ವೀಲ್, ಎರಡು ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್‌ಗಳು, 6 ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಸುಪೀರಿಯರ್ ರೂಪಾಂತರವು ಲೆವೆಲ್ 2 ಎಡಿಎಎಸ್, ಫ್ರೇಮ್‌ಲೆಸ್ ವೈಪರ್‌ಗಳು ಮತ್ತು ರೂಫ್ ರೈಲ್‌ಗಳನ್ನು ಹೊಂದಿದೆ.
BYD eMax 7 ಎರಡು ಬ್ಯಾಟರಿ ಆಯ್ಕೆಗಳೊಂದಿಗೆ ಬರುತ್ತದೆ. ಪ್ರೀಮಿಯಂ ರೂಪಾಂತರವು 420 ಕಿಮೀ ವ್ಯಾಪ್ತಿಯನ್ನು ಹೊಂದಿದ್ದು, ಇದರಲ್ಲಿ 55.4 kWh ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಸುಪೀರಿಯರ್ ಟ್ರಿಮ್‌ನಲ್ಲಿ 71.8 kWh ಬ್ಯಾಟರಿ ಇದ್ದು, ಅದು ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದ್ರೆ 530 ಕಿಮೀ ಓಡಬಲ್ಲದು.
BYD ಪ್ರೀಮಿಯಂ ರೂಪಾಂತರದಲ್ಲಿ 161 bhp ಎಲೆಕ್ಟ್ರಿಕ್ ಮೋಟಾರ್ ಇದೆ. ಸುಪೀರಿಯರ್ ಟ್ರಿಮ್‌ನಲ್ಲಿ 201 BHP ಇ-ಮೋಟಾರ್ ಅನ್ನು ನೀಡಲಾಗಿದೆ. ಎರಡೂ ರೂಪಾಂತರಗಳ ಗರಿಷ್ಠ ವೇಗ ಗಂಟೆಗೆ 180 ಕಿಮೀ. eMax 77 kW AC ಚಾರ್ಜರ್‌ನೊಂದಿಗೆ ಬರುತ್ತದೆ.
BYD eMax 7 ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ: ಕ್ವಾರ್ಟ್ಜ್ ಬ್ಲೂ, ಹಾರ್ಬರ್ ಗ್ರೇ, ಕ್ರಿಸ್ಟಲ್ ವೈಟ್ ಮತ್ತು ಕಾಸ್ಮೊಸ್ ಬ್ಲಾಕ್. ಇದರಲ್ಲಿ 8 ವರ್ಷಗಳ ಬ್ಯಾಟರಿ ವಾರಂಟಿಯಿದೆ.
BYD eMax 7 ಎಕ್ಸ್ ಶೋರೂಂ ಬೆಲೆ:
ಪ್ರೀಮಿಯಂ 6S – 26.90 ಲಕ್ಷ ರೂ.
ಪ್ರೀಮಿಯಂ 7S – 27.50 ಲಕ್ಷ ರೂ.
ಸುಪೀರಿಯರ್ 6ಎಸ್ – 29.30 ಲಕ್ಷ ರೂ.
ಸುಪೀರಿಯರ್ 7ಎಸ್ – 29.90 ಲಕ್ಷ ರೂ.