
ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಿಖಿಲ್ ಅರ್ಜುನ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಅದುಹೇಗೆ ಅಭಿಮನ್ಯು ಆದವನು ಈಗ ಅರ್ಜುನ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಿಖಿಲ್ ಎರಡು ಬಾರಿ ಸೋತಿದ್ದಾರೆ. ಆಗ ಅಭಿಮನ್ಯು ಆಗಿರಲಿಲ್ವಾ? ಎಂದು ಟಾಂಗ್ ನೀಡಿದರು.
ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೇ ನಿಖಿಲ್ ಮಂಡ್ಯದಲ್ಲಿ ಸೋತಿದ್ದಾರೆ. ರಾಮನಗರದಲ್ಲಿ ಸೋತಿದ್ದಾಗ ಅಭಿಮನ್ಯು ಆಗಿರಲಿಲ್ವಾ? ಈಗ ಇದ್ದಕ್ಕಿದ್ದಂತೆ ಅದೇನು ಅರ್ಜುನ, ಅಭಿಮನ್ಯು ಆಗಿರುವುದು? ಎಂದು ತಿರುಗೇಟು ನೀಡಿದರು.