ದೇಹಕ್ಕೆ ತಂಪು ನೀಡುವ ಮಜ್ಜಿಗೆ ಮನುಷ್ಯನ ಆರೋಗ್ಯಕ್ಕೆ ಬಹಳ ಉತ್ತಮವಾದದು. ಮಜ್ಜಿಗೆಯಲ್ಲಿ ಈರುಳ್ಳಿಯನ್ನು ಹಾಕಿ ಸೇವಿಸುವುದರಿಂದ ಹೊಟ್ಟೆನೋವು ಸಮಸ್ಯೆ ನಿವಾರಣೆಯಾಗುತ್ತದೆ. ಬೇಸಿಗೆಯಲ್ಲಿ ಬಹಳಷ್ಟು ಜನ ಬಿಸಿಲಿನ ತಾಪವನ್ನು ತಡೆಯಲಾರದೆ ಮಜ್ಜಿಗೆ ಕುಡಿಯುತ್ತಾರೆ.
ಅಜೀರ್ಣತೆ ಸಮಸ್ಯೆ ಇದ್ದರೆ ಮಜ್ಜಿಗೆಯಲ್ಲಿ ಈರುಳ್ಳಿ ಹಾಕಿಕೊಂಡು ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ ಹಾಗೂ ದೇಹಕ್ಕೆ ತಂಪಾಗುತ್ತದೆ. ದೇಹದ ಉಷ್ಣದ ಸಮಸ್ಯೆಯನ್ನು ನಿವಾರಿಸಲು ಮಜ್ಜಿಗೆ ಹೆಚ್ಚು ಸಹಕಾರಿಯಾಗಿದೆ. ಬಿಸಿಲಿನ ಝಳದಿಂದ ಹಿಂದಿರುಗಿದ ತಕ್ಷಣ ಮಜ್ಜಿಗೆಯಲ್ಲಿ ಈರುಳ್ಳಿ ಹಾಕಿ ಕುಡಿಯುವುದರಿಂದ ದೇಹ ತಂಪಾಗುತ್ತದೆ.
ಆದ್ದರಿಂದ ಹಿಂದಿನ ಕಾಲದ ಜನರು ಮಜ್ಜಿಗೆಯನ್ನು ಒಂದು ತಂಪು ಪಾನೀಯವಾಗಿ ಬಳಸುತ್ತಿದ್ದರು. ಇಂದಿಗೂ ಮಜ್ಜಿಗೆಯನ್ನು ಬೇಸಿಗೆಯಲ್ಲಿ ಇಷ್ಟಪಟ್ಟು ಕುಡಿಯುವವರು ಇದ್ದಾರೆ.