
ಐಎಎಸ್ ಅಧಿಕಾರಿಯು 1968 ರಿಂದ ಆರು ವಿಭಿನ್ನ ಭಾರತೀಯ ಪೈಸೆಗಳನ್ನು ತೋರಿಸುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಈ ನಾಣ್ಯಗಳಿಂದ ನೀವು ಏನನ್ನಾದರೂ ಖರೀದಿ ಮಾಡಿದ್ದು ನೆನಪಿದೆಯಾ ಎಂದು ನೆಟ್ಟಿಗರನ್ನು ಅವರು ಪ್ರಶ್ನಿಸಿದ್ದಾರೆ.
ಇವರು ಚಿತ್ರ ಶೇರ್ ಮಾಡಿರುವ ಕೆಲವೇ ಗಂಟೆಗಳಲ್ಲಿ ಹಲವಾರು ಕಮೆಂಟ್ಗಳು ಬಂದಿವೆ. ಒಂದು ದಶಲಕ್ಷಕ್ಕೂ ಹೆಚ್ಚುಮಂದಿ ಇದನ್ನು ನೋಡಿದ್ದು, 15 ಸಾವಿರಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ. ತಮ್ಮ ಕಾಲದ ನಾಣ್ಯಗಳ ಕುರಿತು ನೆನಪಿನ ಬುತ್ತಿಯನ್ನು ಹಲವರು ಬಿಚ್ಚಿಟ್ಟಿದ್ದಾರೆ.