
ಬೆಂಗಳೂರು: ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ರಸ್ತೆ ಕೆಳ ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ರೈಲು ಸೇವೆಗಳಲ್ಲಿ ಬದಲಾವಣೆ ಮತ್ತು ಭಾಗಶಃ ರದ್ದು ಮಾಡಲಾಗಿದೆ.
ಫೆಬ್ರವರಿ 24, 27ರಂದು ಬಂಗಾರಪೇಟೆ -ಕೆಎಸ್ಆರ್ ಬೆಂಗಳೂರು(16521) ಮೆಮು ರೈಲು ಬೈಯ್ಯಪ್ಪನಹಳ್ಳಿಯಲ್ಲಿ ಕೊನೆಗೊಳ್ಳತ್ತದೆ.
ಫೆಬ್ರವರಿ 24 ಮತ್ತು 27ರಂದು ಹೊಸಪೇಟೆ- ಕೆಎಸ್ಆರ್ ಬೆಂಗಳೂರು(56520) ಡೈಲಿ ಪ್ಯಾಸೆಂಜರ್ ರೈಲು ಯಶವಂತಪುರದಲ್ಲಿ ನಿಲುಗಡೆಯಾಗಲಿದೆ.
ಫೆಬ್ರವರಿ 25 ಮತ್ತು 28 ರಂದು ಕೆಎಸ್ಆರ್ ಬೆಂಗಳೂರು -ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲು ಕೆಎಎಸ್ಆರ್ ಬೆಂಗಳೂರು ಬದಲು ಯಶವಂತಪುರದಿಂದ ಹೊರಡಲಿದೆ.
ಫೆಬ್ರವರಿ 23 ಮತ್ತು 26ರಂದು ಹೊರಡುವ ಎಸ್ಎಸ್ಎಸ್ ಹುಬ್ಬಳ್ಳಿ- ಕೆಎಸ್ಆರ್ ಬೆಂಗಳೂರು 07339 ಡೈಲಿ ಎಕ್ಸ್ಪ್ರೆಸ್ ವಿಶೇಷ ರೈಲು ಯಶವಂತಪುರದಲ್ಲಿ ಕೊನೆಗೊಳ್ಳುತ್ತದೆ.
ಫೆಬ್ರವರಿ 24 ಮತ್ತು 27 ರಂದು ಹೊರಡುವ ಕೆಎಸ್ಆರ್ ಬೆಂಗಳೂರು- ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ ವಿಶೇಷ ರೈಲು ಯಶವಂತಪುರದಿಂದ ಹೊರಡಲಿದೆ.