ಪ್ರತಿಯೊಬ್ಬರಿಗೂ ತಮ್ಮ ಮದುವೆಯ ಬಗ್ಗೆ ಅನೇಕ ಕನಸುಗಳಿರುತ್ತವೆ. ತನ್ನ ಸಂಗಾತಿಯೊಂದಿಗೆ ಇಡೀ ಜೀವನ ಕಳೆಯುವ ಮಧುರ ಬಾಂಧವ್ಯದ ಬಗ್ಗೆ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ.
ಆದರೆ ಆ ನಿರೀಕ್ಷೆ ಹುಸಿಯೆಂಬುದು ತಿಳಿದಾಗ ಆ ಜೀವಕ್ಕಾಗುವ ನೋವು ಅಷ್ಟಿಷ್ಟಲ್ಲ. ಮದುವೆಯ ದಿನವೇ ವರನ ಮೋಸದ ಬಗ್ಗೆ ತಿಳಿದ ವಧು ನೋವಿನಿಂದ ಕಣ್ಣೀರು ಹಾಕುತ್ತಾ ಎದೆಗುಂದಿದಳು. ತಾನು ಮದುವೆಯಾಗ್ತಿದ್ದ ಹುಡುಗ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಕಂಡುಹಿಡಿದ ನಂತರ ವಧು ತನ್ನ ಮದುವೆಯ ದಿನದಂದು ಮಾನಸಿಕವಾಗಿ ಕುಸಿದುಹೋದಳು.
ಇಂತಹ ಕರುಣಾಜನಕ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು ಮದುವೆ ಹೆಣ್ಣಿನ ಸ್ಥಿತಿಗೆ ಮರುಗುವಂತಿದೆ. ಮದುವೆಗೆಂದು ಸಿದ್ಧವಾಗಿದ್ದ ನವ ವಧು ವಾಹನವೊಂದರ ಬಾಗಿಲು ಬಡಿದು ತನ್ನ ವರನನ್ನು ಕರೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವಾಹನದಲ್ಲಿ ವರ ಪ್ಯಾಂಟ್ ಲೆಸ್ ಆಗಿದ್ದು ಮತ್ತೊಂದು ಹೆಣ್ಣಿನ ಜೊತೆ ಸಂಬಂಧ ಹೊಂದಿರುವುದನ್ನ ತೋರಿಸುತ್ತದೆ. ಇದು ಗೊತ್ತಾಗ್ತಿದ್ದಂತೆ ಎದೆಗುಂದಿದ ವಧು ಅನಿಯಂತ್ರಿತವಾಗಿ ಕಣ್ಣೀರು ಸುರಿಸುತ್ತಾಳೆ. ಅವಳ ಸ್ನೇಹಿತರು ವಧುವನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
https://twitter.com/NoCapFights/status/1710725648850026730?ref_src=twsrc%5Etfw%7Ctwcamp%5Etweetembed%7Ctwterm%5E1710725648850026730%7Ctwgr%5Ef915e9e6373481f97bb70ad40ca0378558c9ff7b%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Ftimesnownews-epaper-dhf729babb066e4159bc8e6ad4fc8cd3b9%2Fbridecatchesgroomcheatingonweddingdayinviralvideowatch-newsid-n545226330