
ಬೆಂಗಳೂರು : ಸ್ಯಾಂಡಲ್‌ವುಡ್ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನರಾಗಿದ್ದು, ಇಂದು ಶ್ರೀರಂಗಪಟ್ಟಣದಲ್ಲಿ ಅಸ್ತಿ ವಿಸರ್ಜನೆ ಕಾರ್ಯ ನಡೆದಿದೆ.
ಸ್ಪಂದನಾ ವಿಜಯ ವಿಧಿವಶರಾಗಿ 5 ದಿನಗಳು ಕಳೆದಿದೆ. ಈಡಿಗ ಪದ್ಧತಿಯಂತೆ 3ನೇ ದಿನದ ಕಾರ್ಯ, ಅಸ್ತಿ ವಿಸರ್ಜನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಅಸ್ತಿ ವಿಸರ್ಜನೆಗೂ ಮುನ್ನ ವಿಜಯರಾಘವೇಂದ್ರ ಕುಟುಂಬಸ್ಥರು ಹಾಗೂ ಬಿ.ಕೆ. ಶಿವರಾಂ ಕುಟುಂಬಸ್ಥರು ಪೂಜೆ ಸಲ್ಲಿಸಿದ್ದಾರೆ. 11ನೇ ದಿನದ ಕಾರ್ಯ ಸಹ ಶ್ರೀರಂಗಪಟ್ಟಣದಲ್ಲಿ ನಡೆಯಲಿದೆ ಎನ್ನಲಾಗಿದೆ.
ಆಗಸ್ಟ್ 6ರಂದು ಭಾನುವಾರದಂದು ಹೃದಯಾಘಾತದಿಂದ ಸ್ಪಂದನಾ ವಿಧಿವಶರಾದರು. ಆಗಸ್ಟ್ 9ರಂದು ಹರಿಶ್ಚಂದ್ರ ಘಾಟ್‌ನಲ್ಲಿ ಸ್ಪಂದನಾರ ಅಂತಿಮ ಸಂಸ್ಕಾರ ನಡೆಯಿತು.