BREAKING : ಆಸ್ತಿಯಲ್ಲಿ ಪಾಲು ಕೊಡದೆ ಮೋಸ ಮಾಡಿದ ಮಗ : ಸ್ಥಳದಲ್ಲೇ ತಾಯಿಗೆ ‘ಸಿಎಂ ಸಿದ್ದರಾಮಯ್ಯ’ ಪರಿಹಾರ |Janata Darshana

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಇಂದು ಇಡೀ ದಿನ ಜನತಾ ದರ್ಶನ ಹಮ್ಮಿಕೊಂಡಿದ್ದು, ಇಂದಿನ ಜನತಾ ದರ್ಶನದಲ್ಲಿ ಸಮಸ್ಯೆ ಹೇಳಿಕೊಂಡು ಆಗಮಿಸಿದ್ದ ಜನರಿಗೆ  ಸ್ಥಳದಲ್ಲೇ ಪರಿಹಾರ ನೀಡುವ ಕೆಲಸ ಮಾಡಿದ್ದಾರೆ. 

ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಮಹದೇವಮ್ಮ ಅವರು ತಮ್ಮ ಮಗ ಆಸ್ತಿಯಲ್ಲಿ ಪಾಲು ಕೊಡದೆ ಇಳಿವಯಸ್ಸಿನ ನನಗೆ ಮೋಸ ಮಾಡಿದ್ದಾನೆ, ವಿಭಾಗ ಪತ್ರವನ್ನು ಕೊಡಿಸಿ ರಕ್ಷಣೆ ನೀಡುವಂತೆ ಜನತಾ ದರ್ಶನದಲ್ಲಿ ಮನವಿ ಮಾಡಿದರು.

ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಕರೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದಷ್ಟು ಬೇಗ ಸಮಸ್ಯೆ ಇತ್ಯರ್ಥಪಡಿಸಿ, ಮಹದೇವಮ್ಮ ಅವರಿಗೆ ನ್ಯಾಯ ಕೊಡಿಸುವಂತೆ ಸೂಚಿಸಿದರು.ವೃದ್ಧ ಮಹಿಳೆಗೆ ಅವರ ಆಸ್ತಿಯ ಹಕ್ಕಿನಲ್ಲಿ ನ್ಯಾಯಯುತ ಪಾಲು ಕೊಡಿಸುವ ಮೂಲಕ ಜೀವನಸಂಜೆಯಲ್ಲಿ ನೆಮ್ಮೆದಿಯ ದಿನಗಳನ್ನು ಖಾತ್ರಿಪಡಿಸಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read