ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಎಸ್ ಉಮೇಶ್ ವಿಧಿವಶರಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಸಕ್ರಿಯರಾಗಿದ್ದ ಹಿರಿಯ ನಿರ್ದೇಶಕ ಎಸ್. ಉಮೇಶ್ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಕಾಶಿನಾಥ್ ನಟನೆಯ ‘ಅವಳೇ ನನ್ ಹೆಂಡ್ತಿ’ ಚಿತ್ರಕ್ಕೆ ನಿರ್ದೇಶನ ಮಾಡಿ ಎಸ್. ಉಮೇಶ್ ಅವರು ಫೇಮಸ್ ಆಗಿದ್ದರು. ನಂತರ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.
ನಾನು 1973 ರಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಎಸ್ ಉಮೇಶ್ ಸಹಾಯಕ ನಿರ್ದೇಶಕ, ಸಂಕಲನಕಾರನಾಗಿ ಹಲವು ವರ್ಷ ಕೆಲಸ ಮಾಡಿದ್ದರು. ನಂತರ 1988 ರಲ್ಲಿ ಕಾಶಿನಾಥ್, ಭವ್ಯ ನಟನೆಯ ‘ಅವಳೇ ನನ್ನ ಹೆಂಡ್ತಿ’ ಸಿನಿಮಾ ಮೂಲಕ ನಿರ್ದೇಶಕನಾದರು. ಮೊದಲ ಸಿನಿಮಾ ಸೂಪರ್ ಹಿಟ್ ಆಗಿದ್ದು. ತಮಿಳು, ತೆಲುಗು, ಹಿಂದಿಗೆ ರೀಮೇಕ್ ಆಯಿತು.