ಶಿವಮೊಗ್ಗ : ಶಿವಮೊಗ್ಗ ರೈಲು ನಿಲ್ದಾಣದ ಬಳಿ ಪತ್ತೆಯಾಗಿದ್ದ ನಿಗೂಢ ಬಾಕ್ಸ್ ಗಳನ್ನು ಮಧ್ಯರಾತ್ರಿ ಓಪನ್ ಮಾಡಲಾಗಿದ್ದು, ಬಾಕ್ಸ್ ನಲ್ಲಿ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಎಸ್ ಪಿ ಜಿ.ಕೆ. ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಡರಾತ್ರಿ ಬಾಕ್ಸ್ ಗಳನ್ನು ಓಪನ್ ಮಾಡಲಾಗಿದ್ದು, ಬಾಕ್ಸ್ ನಲ್ಲಿ ಯಾವುದೇ ಸ್ಪೋಟಕ ವಸ್ತುಗಳು ಇರಲಿಲ್ಲ. ಬಾಕ್ಸ್ ತೆರೆದಾಗ ಅನುಪಯುಕ್ತ ವಸ್ತುಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಶಿವಮೊಗ್ಗಕ್ಕೆ ತೆರಳಿತ್ತು.ಇಂದು ಬೆಳಗಿನ ಜಾವ ಕ್ರಷರ್ ಕಲ್ಲು ಸ್ಪೋಟಕ ಮಾದರಿಯಲ್ಲಿ ಬೀಗ ಒಡೆಯಲಾಗಿದೆ. ತಡರಾತ್ರಿ 2:20ಕ್ಕೆ ಮೊದಲ ಪೆಟ್ಟಿಗೆ ಮತ್ತು ಬೆಳಗಿನ ಜಾವ 3.24ಕ್ಕೆ ಎರಡನೇ ಪೆಟ್ಟಿಗೆಯ ಬೀಗ ಒಡೆಯಲಾಗಿದೆ.
ಸದ್ಯ ಈ ಬಾಕ್ಸ್ ಗಳಲ್ಲಿ ಬಿಳಿ ಪೌಡರ್ ಮಾದರಿಯ ವಸ್ತು ಪತ್ತೆಯಾಗಿದೆ. ಸದ್ಯಕ್ಕೆ ಈ ಪೌಡರ್ ಯಾವುದು ಎಂಬುದರ ಮಾಹಿತಿ ಲಭ್ಯವಾಗಿಲ್ಲ. ಅಧಿಕಾರಿಗಳು ಈ ಪೌಡರ್ ಮಾದರಿಯನ್ನು ಎಫ್ ಎಸ್ ಎಲ್ ಗೆ ಕಳುಹಿಸಲು ನಿರ್ಧರಿಸಿದ್ದಾರೆ. ಎಫ್ ಎಸ್ ಎಲ್ ವರದಿ ಬಳಿಕ ನಿಖರ ಮಾಹಿತಿ ಲಭ್ಯವಾಗಲಿದೆ.