
ಬೆಂಗಳೂರು : 2021 ನೇ ಸಾಲಿನ ಪರಿಷತ್ ನ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಮಾಜಿ ಸಚಿವ ಎಸ್. ಆರ್ ಪಾಟೀಲ್ ಅವರಿಗೆ ಘೋಷಣೆ ಮಾಡಲಾಗಿದೆ.
ಜುಲೈ 18ರ ಸಂಜೆ 6 ಗಂಟೆಗೆ ವಿಧಾನಸೌಧಧ 3 ನೇ ಮಹಡಿಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಆರ್. ಪಾಟೀಲ್ ಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈಗಾಗಲೇ ಎಸ್.ಆರ್. ಪಾಟೀಲ್ ಗೆ ಈಬಗ್ಗೆ ವಿಧಾನಪರಿಷತ್ ಕಾರ್ಯದರ್ಶಿ ಮೀನಾ ನಾಯಕ್ ಪತ್ರ ಬರೆದಿದ್ದಾರೆ.
ಲೋಕಸಭೆ ಮಾದರಿಯಲ್ಲಿ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡುವಂತೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾರವರು ಸೂಚನೆ ನೀಡಿದ್ದರು. ಶಾಸಕರಲ್ಲಿ ಅತ್ಯುತ್ತಮ ಸಂಸದೀಯ ಪಟುವನ್ನು ಗುರುತಿಸಲು ಈ ಪ್ರಶಸ್ತಿ ಘೋಷಿಸಲಾಗಿದೆ.